ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದಾನ ನೀಡಿದ ಜಮೀನಿನಲ್ಲಿ ಬಪ್ಪನಾಡು ದೇವಸ್ಥಾನದ ಜೀರ್ಣೋದ್ದಾರಸಮಿತಿಯ ವತಿಯಿಂದ ನೂತನ ಪಾಕ ಶಾಲೆ ಹಾಗೂ ಮೂಲಭೂತ ಸೌಕರ್ಯಗಳ ಕಟ್ಟಡಕ್ಕೆ ಶಿಲಾನ್ಯಾಸವನ್ನು ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ದೇವಳದ ಆಡಳಿತ ಮೊಕ್ತೇಸರರಾದ ಎನ್.ಎಸ್.ಮನೋಹರ ಶೆಟ್ಟಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಶೇಖರ್ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭ ದುಗ್ಗಣ್ಣ ಸಾವಂತರು ಮಾತನಾಡಿ ದೇವಾಲಯಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ ಎಂದರು.
ಶಿಮಂತೂರು ಉದಯ ಶೆಟ್ಟಿ, ಡಾ|ಹರಿಶ್ಚಂದ್ರ ಪಿ.ಸಾಲಿಯಾನ್, ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್, ಮುರಳೀಧರ ಭಂಡಾರಿ, ಸಂಜೀವ ದೇವಾಡಿಗ, ಕರುಣಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಇಂಜಿನಿಯರ್ ಏಕನಾಥ್, ಗುರುವಪ್ಪ ಕೋಟ್ಯಾನ್, ಚೆನ್ನಪ್ಪ, ರಂಜನ್ ಶೆಟ್ಟಿ ಹಾಗೂ ಪುರಂದರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/02/2022 03:15 pm