ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಅಂಚೆ ಕಛೇರಿಯಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸಿ ಬೈಕಂಪಾಡಿ ಮೀನಕಳಿಯ ಅಂಚೆ ಕಚೇರಿಗೆ ವರ್ಗಾವಣೆಗೊಂಡ ಕವಿತ ಭಾಸ್ಕರ್ ಸಾಲಿಯಾನ್ ರವರನ್ನು ಶ್ರೀ ಅದಿಜನಾರ್ದನ ದೇವಸ್ಥಾನ ಶಿಮಂತೂರು ಮತ್ತು ಊರವರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ್ ಎನ್ ಶೆಟ್ಟಿ, ಮಾತನಾಡಿ ವೃತ್ತಿಯಲ್ಲಿ ಪ್ರಾಮಾಣಿಕತೆ ಕರ್ತವ್ಯನಿಷ್ಠೆ ಅಳವಡಿಸಿಕೊಂಡರೆ ಜನ ಗೌರವಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿ ಸದಸ್ಯರಾದ ಹರೀಶ್ ಜೆ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಶಶಿಕಲಾ ಕುಂದರ್, ಕಲ್ಪನಾ ಬಲ್ಲಾಳ್, ಶಿಮಂತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪದ್ಮಿನಿ ವಿಜಯ ಶೆಟ್ಟಿ, ಯುವಕ ಮಂಡಲ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು
Kshetra Samachara
29/01/2022 02:04 pm