ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ರಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಇಲಾಖೆಯು ಅಂತಿಮ ಒಪ್ಪಿಗೆ ನೀಡಿ ಕೇಂದ್ರದ ಶೇ. 50 ಪಾಲು ಹಣ ಬಿಡುಗಡೆಗೆ ಅಂತಿಮ ಆದೇಶ ನೀಡಿದೆ. ಕೆ.ಐ.ಎ.ಡಿ.ಬಿ. ಉಳಿಕೆ ಶೇ.50 ಪಾಲು ಹೂಡಿಕೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.
ಈ ಯೋಜನೆ ಕಾರ್ಯರೂಪಕ್ಕೆ ಬರಲು ಸಹಕರಿಸಿದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರದ ರಸಾಯನಿಕ ಖಾತೆಯ ಸಚಿವ ಭಗವಂತ್ ಕೂಬಾರವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರಿಗೆ ದಕ್ಷಿಣ ಕನ್ನಡ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಸಹಕರಿಸಿದ ಕೇಂದ್ರ ರಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಇಲಾಖೆಯ ಹಿಂದಿನ ಸಚಿವರಾಗಿದ್ದ ದಿ. ಅನಂತಕುಮಾರ್, ಸದಾನಂದ ಗೌಡರು ಹಾಗೂ ಮಾನ್ ಸುಖ್ ಮಾಂಡವೀಯ ರವರಿಗೂ ppನಳಿನ್ ಕುಮಾರ್ ಕಟೀಲ್ ರವರು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದ ಬಳಿ ಸುಮಾರು 104 ಎಕರೆ ಕೆ.ಐ.ಎ.ಡಿ.ಬಿ. ಪ್ರದೇಶದಲ್ಲಿ ಪ್ರಾರಂಭಗೊಳ್ಳಲಿದೆ.
Kshetra Samachara
21/01/2022 07:22 pm