ಮುಲ್ಕಿ: ಇತಿಹಾಸ ಪ್ರಸಿದ್ಧ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ 9ರಂದು ವರ್ಷಾವಧಿ ಷಷ್ಠಿ ಮಹೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಗುರುವಾರ ವಿಶೇಷ ಪ್ರಾರ್ಥನೆಯೊಂದಿಗೆ ಉಗ್ರಾಣ ಮುಹೂರ್ತ ನಡೆಯಿತು.
ಶುಕ್ರವಾರ ರಾತ್ರಿ ಶ್ರೀ ದೇವರಿಗೆ ರಂಗಪೂಜೆ ಹಾಗೂ ಬಯನ ಬಲಿ ಉತ್ಸವ ನಡೆಯಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರಿದಾಸ ಭಟ್, ಸದಸ್ಯರಾದ ಟಿಕೆ ಮಧುಸೂದನ್ ಆಚಾರ್, ವಿಜಯಕುಮಾರ್ ರೈ, ಲೋಕಯ್ಯ ಪೂಜಾರಿ ಪುರುಷೋತ್ತಮ ರಾವ್ ಉಪಸ್ಥಿತರಿದ್ದರು. ಸೋಮವಾರ ಶ್ರೀದೇವರಿಗೆ ದೊಡ್ಡ ರಂಗಪೂಜೆ ಭೂತಬಲಿ ಮಂಗಳವಾರ ಧ್ವಜಾರೋಹಣ ನಡೆಯಲಿದೆ.
Kshetra Samachara
04/12/2021 03:47 pm