ಮೂಡಬಿದ್ರೆ:ನವೆಂಬರ್ 27 ರಂದು ನಡೆಯಲಿರುವ 19ನೇ ವರ್ಷದ ಮೂಡುಬಿದಿರೆ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳದ ಪೂರ್ವಭಾವಿ ಸಭೆಯು ಕಂಬಳ ಕ್ರೀಡಾಂಗಣದ ಬಳಿಯ ಸೃಷ್ಟಿ ಗಾರ್ಡನ್ ಹಾಲ್ ನಲ್ಲಿ ಕಂಬಳ ಸಮಿತಿಯ ಅಧ್ಯಕ್ಷರು, ಮಾನ್ಯ ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಕೋಶಾಧ್ಯಕ್ಷರಾದ ಭಾಸ್ಕರ್ ಎಸ್. ಕೋಟ್ಯಾನ್, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಜೈನ್,ತೀರ್ಪುಗಾರರ ಸಂಚಾಲಕರಾದ ರೆಂಜಾಳ ಕಾರ್ಯ ಸುರೇಶ್ ಕೆ. ಪೂಜಾರಿ,ಪ್ರಮುಖರಾದ ಸುದರ್ಶನ್ ಎಂ,ಸುನೀಲ್ ಆಳ್ವ,ಮೇಘನಾಥ್ ಶೆಟ್ಟಿ, ಕೆ. ಆರ್. ಪಂಡಿತ್, ಈಶ್ವರ್ ಕಟೀಲ್, ಪ್ರಸಾದ್ ಭಂಡಾರಿ, ನಾಗರಾಜ್ ಪೂಜಾರಿ, ರಶ್ಮಿತ್ ಶೆಟ್ಟಿ ಹೊಕ್ಕಾಡಿಗೋಳಿ, ಧನಕೀರ್ತಿ ಬಲಿಪ ಹಾಗೂ ಮೂಡುಬಿದಿರೆ ಕಂಬಳ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು
Kshetra Samachara
03/11/2021 08:09 am