ಮುಲ್ಕಿ: ಮುಲ್ಕಿ ಪರಿಸರದಲ್ಲಿ ಕರ್ನಾಟಕ ಚಿತ್ರರಂಗ ಕಂಡ ಗ್ರೇಟ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮುಲ್ಕಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಶಂಕರ್ ನಾಗ್ ಆಟೋ ಸ್ಟ್ಯಾಂಡ್ ನಲ್ಲಿ ಬ್ರಹದಾಕಾರದ ಪುನೀತ್ ರಾಜ್ ಕುಮಾರ್ ಫ್ಲೆಕ್ಸ್ ಅಳವಡಿಸಿ ಶನಿವಾರ ಸಂಜೆ ದೀಪಗಳ ಸಾಲಿನ ಮೂಲಕ ಆಟೋ ಚಾಲಕರು ಅಗಲಿದ ಚಿತ್ರ ನಟನಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.
ಈ ಸಂದರ್ಭ ಆಟೋ ಫ್ರೆಂಡ್ಸ್ ಅಧ್ಯಕ್ಷ ಮಂಜುನಾಥ ಉಪ್ಪಾರ್, ಪದಾಧಿಕಾರಿಗಳಾದ ವಿಶ್ವನಾಥ, ಗಿರೀಶ, ಸಂತೋಷ್ ದೇಶುಣಿಗಿ, ಪ್ರಶಾಂತ್ ಕೊಂಡುಗುಳಿ ಮತ್ತಿತರರಿದ್ದರು.
ಮುಲ್ಕಿ ಮೀನುಮಾರುಕಟ್ಟೆ ರಸ್ತೆಯಲ್ಲಿ ಅಪ್ಪು ಅಭಿಮಾನಿಗಳ ಬಳಗ ಅಗಲಿದ ನಟ ಪುನೀತ್ ರಾಜಕುಮಾರ್ ರವರ ಬೃಹದಾಕಾರದ ಕಟೌಟ್ ಹಾಕಿದ್ದು ಅಪ್ಪು ಬಗ್ಗೆ ಗ್ರಾಮೀಣ ಭಾಗದ ಜನತೆ ಯಲ್ಲಿದ್ದ ಪ್ರೀತಿ ಎದ್ದು ಕಾಣುತ್ತಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಷಕ್ಕೊಮ್ಮೆ ಕರಾವಳಿಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಕರಾವಳಿ ಭಾಗದಲ್ಲಿ ಚಿತ್ರೀಕರಣದ ವೇಳೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ ಎಂದು ಅವರನ್ನು ಹತ್ತಿರದಿಂದ ಕಂಡ ಅಭಿಮಾನಿಗಳು ಪತ್ರಿಕೆಗೆ ತಿಳಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುವಾಗಲೂ ತಮ್ಮ ಅಭಿಮಾನಿಗಳ ಜೊತೆ ನಯ ವಿನಯದಿಂದ ವರ್ತಿಸುತ್ತಿದ್ದ ಅವರು ಅಭಿಮಾನಿಗಳ ದೇವರು ಎಂದೇ ಪ್ರಸಿದ್ಧರಾಗಿದ್ದರು
Kshetra Samachara
30/10/2021 08:38 pm