ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಅಲಂಗಾರು ಈಶ್ವರ ಭಟ್ಟರಿಗೆ ವಿಪ್ರ ಭೂಷಣ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಅಶ್ವತ್ಥಪುರದ ಶ್ರೀ ನಾರಾಯಣಾನಂದ ಸರಸ್ವತಿ ಟ್ರಸ್ಟ್ ವತಿಯಿಂದ ವಿಪ್ರ ಭೂಷಣ ಪ್ರಶಸ್ತಿಯನ್ನು ಅಲಂಗಾರು ಈಶ್ವರ ಭಟ್ ಅವರಿಗೆ ಪ್ರದಾನಿಸಲಾಯಿತು. ‌

ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಆಶೀರ್ವಚನ ನೀಡಿ, ಅರ್ಚಕರು ದೇವರನ್ನು ಮಕ್ಕಳಂತೆ ಅರ್ಚಿಸಿ ಪೂಜಿಸಬೇಕು. ಅರ್ಚನೆ ಮಾಡುವವರು ಅರ್ಚಕರು. ಅರ್ಚನೆ ಮತ್ತು ಪೂಜೆಯ ವ್ಯತ್ಯಾಸ ಈಗ ಗೊತ್ತಿಲ್ಲ. ಪೂಜೆ ಮಾಡುವುದರಿಂದ ಪೂಜಾರಿಗಳು ಎಂದೂ ಕರೆಯುತ್ತಾರೆ ಎಂದರು. ಅರ್ಚಕರು ಎನ್ನುವುದು ದೊಡ್ಡ ಸ್ಥಾನ. ಆದರೆ ಎಲ್ಲ ದೇವಸ್ಥಾನದ ಅರ್ಚಕರು ಶ್ರೀಮಂತರಲ್ಲ. ಕಡು ಬಡವರೂ ಇದ್ದಾರೆ. ಆದರೂ ಶ್ರದ್ಧಾಭಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಅಶ್ವತ್ಥಪುರ ಕ್ಷೇತ್ರದ ಮೊಕ್ತೇಸರ ಎಲ್.ವಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ಧರ್ಮದರ್ಶಿ ಜಿತೇಂದ್ರ ಕುಂದೇಶ್ವರ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ‌ ಕಶೆಕೋಡಿ ಸೂರ್ಯನಾರಾಯಣ ಭಟ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ಮಾತನಾಡಿದರು.

ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ಯಜ್ಞೇಶ್ವರ ಭಟ್, ಇಂದಿರಮ್ಮ, ಟ್ರಸ್ಟಿ ಶಿವಾನಂದ ಭಟ್, ಟ್ರಸ್ಟಿ ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಈಶ್ವರ ಭಟ್ಟರಿಗೆ ವಿಶೇಷ ಗೌರವ ಸಲ್ಲಿಸಿದರು. ಟ್ರಸ್ಟಿ ಛಾಯಾಪತಿ ಕಂಚಿಬೈಲು ಸ್ವಾಗತಿಸಿದರು. ಟ್ರಸ್ಟಿ ರಾಜೇಶ್ವರ ಭಟ್ ವಂದಿಸಿದರು. ಶಾಲಿನಿ ಪ್ರಸಾದ್ ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

22/02/2021 10:30 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ