ಬಂಟ್ವಾಳ: ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ಬಂಧನದ ವಿರುದ್ಧ ವಿಮೆನ್ ಇಂಡಿಯಾ ಮೂವ್ ಮೆಂಟ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಬಂಟ್ವಾಳದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನಾಕಾರರು 'ಜೊತೆಯಾಗಿ ಖಂಡಿಸೋಣ ದಮನಿತರ ದ್ವನಿಯಾಗೋಣ, ಸರಕಾರವನ್ನು ಪ್ರಶ್ನಿಸುವುದು ಪ್ರತಿ ಪ್ರಜೆಯ ಹಕ್ಕಾಗಿದೆ' ಎಂಬ ಅನೇಕ ಪ್ಲೇ ಕಾರ್ಡ್ ಗಳನ್ನು ಪ್ರದರ್ಶಿಸಿದರು. ವಿಮೆನ್ ಇಂಡಿಯಾ ಮೂವ್ ಮೆಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಷಾ ಬಜ್ಪೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷೆ ಮರಿಯಮ್ಮ, ಜಿಲ್ಲಾ ಕೋಶಾಧಿಕಾರಿ ಝುಲೈಖ, ಜಿಲ್ಲಾ ಸಮಿತಿ ಸದಸ್ಯರಾದ ಸಂಶಾದ್ , ಸಜರ, ಮುಮ್ತಾಜ್ ಹಾಜರಿದ್ದರು.
Kshetra Samachara
20/02/2021 06:49 pm