ಬಂಟ್ಚಾಳ: ಫೆ.20 ಮತ್ತು 21ರಂದು ಬಿ.ಸಿ.ರೋಡಿನ ಕೈಕುಂಜ ರಸ್ತೆಯಲ್ಲಿ ನಿರ್ಮಾಣವಾಗಿರುವ ಕನ್ನಡ ಭವನ ಉದ್ಘಾಟನೆ ಮತ್ತು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ ಸಭೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಬಸ್ತಿ ವಾಮನ ಶೆಣೈ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಈ ಸಂದರ್ಭ ಮಾಹಿತಿ ನೀಡಿದ ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್, ಸಮ್ಮೇಳನದ ವಿವರ ನೀಡಿ ಪೂರ್ವಾಧ್ಯಕ್ಷರಿಗೆ ಸನ್ಮಾನ, ಹಿಂದಿನ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ, ವಿಚಾರಗೋಷ್ಠಿ ನಡೆಯಲಿವೆ ಎಂದರು. ರಾಜ್ಯಮಟ್ಟದ ಪುಸ್ತಕ ಮೇಳ, ರಂಗಾಯಣದ ನಾಟಕ, ಯಕ್ಷಗಾನ, ಆಕರ್ಷಕ ಮೆರವಣಿಗೆ ನಡೆಯಲಿದೆ ಎಂದರು. ವಾಹನಗಳ ಸಹಿತ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬಾವುಟ ಇರಬೇಕು ಎಂದರು.
ಪ್ರಮುಖರಾದ ಎ.ಸಿ.ಭಂಡಾರಿ, ಸುದರ್ಶನ ಜೈನ್, ಅಬ್ಬಾಸ್ ಆಲಿ, ನಾಗವೇಣಿ ಮಂಚಿ, ಗಂಗಾಧರ ಭಟ್, ಮಹಾಬಲೇಶ್ವರ ಹೆಬ್ಬಾರ್, ಜಯಾನಂದ ಪೆರಾಜೆ, ಕಜೆ ರಾಮಚಂದ್ರ ಭಟ್, ತುಕಾರಾಮ ಪೂಜಾರಿ, ಬಿ.ಎಚ್.ಖಾದರ್, ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/02/2021 10:22 pm