ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಕುಡಿಪ್ಪಾಡಿಯಲ್ಲಿ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ; ಜಲಮೂಲ ಸಂರಕ್ಷಣೆ ಮಾಹಿತಿ

ಪುತ್ತೂರು: ತಾಲೂಕಿನ ಕುಡಿಪ್ಪಾಡಿ ಗ್ರಾಪಂನಲ್ಲಿ ಜಲಜೀವನ್ ಮಿಷನ್ ನ ಐಇಸಿ ಮತ್ತು ಹೆಚ್.ಆರ್.ಡಿ. ಕಾರ್ಯಚಟುವಟಿಕೆಯಡಿ ಗುರುವಾರ ಗ್ರಾಮ ಕ್ರಿಯಾ ಯೋಜನೆಯ ಪೂರ್ವಾಪರ ಸ್ಪಷ್ಟ ಮಾಹಿತಿಗಾಗಿ ಗ್ರಾಮದ ನಕ್ಷೆ ಬಿಡಿಸುವ ಮೂಲಕ ಗ್ರಾಮಸ್ಥರು ಮತ್ತು ಪಂಚಾಯಿತಿ ಅಧಿಕಾರಿ, ಸಿಬ್ಬಂದಿಯಿಂದಲೇ ಮಾಹಿತಿ ಪಡೆಯಲಾಯಿತು‌.

ದ‌.ಕ. ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ಜಲಜೀವನ್ ಮಿಷನ್, ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮುದಾಯ ಸಂಸ್ಥೆಯ ಡಬ್ಲ್ಯೂಎಸ್ ಇ ಅಶ್ವಿನ್ ಕುಮಾರ್ ಮತ್ತು ಹೆಚ್.ಆರ್.ಡಿ ಫಲಹಾರೇಶ್ ಮಣ್ಣೂರಮಠ ನೇತೃತ್ವದಲ್ಲಿ ಗ್ರಾಮದ ಚಿತ್ರಣ ಅನಾವರಣಗೊಳಿಸಲಾಯಿತು. ಈಗಾಗಲೇ ಇರುವ ಮತ್ತು ಭವಿಷ್ಯಕ್ಕೆ ಅವಶ್ಯಕತೆ ಇರುವ ಕುಡಿಯುವ ನೀರಿನ ಸೌಕರ್ಯಗಳ ಪಟ್ಟಿಯನ್ನು ಗ್ರಾಮಸ್ಥರು ನೀಡಿದರು.

ಈ ಸಂದರ್ಭ ನೀರಿನ ಕುರಿತು ಜಾಗೃತಿ ಮೂಡಿಸಲು ಸ್ವಸಹಾಯ ಸಂಘಗಳ ಜಾಥಾ, ಕಿರುಚಿತ್ರ ಪ್ರದರ್ಶನ, ಅಂತರ್ಜಲ ಪುನಶ್ಚೇತನ ಹಾಗೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮದ ದೇವಸ್ಥಾನದ ಆವರಣದಲ್ಲಿರುವ ತೀರ್ಥತಾಣ(ಕೆರೆ)ಕ್ಕೆ ಭೇಟಿ ನೀಡಿ ಜಲಮೂಲಗಳ ಸಂರಕ್ಷಣೆ ಕುರಿತು ತಿಳಿಸಲಾಯಿತು‌. ಗ್ರಾಮಸ್ಥರು, ಪಂ. ಸಿಬ್ಬಂದಿ, ಸದಸ್ಯರು ಸಹಕಾರ ನೀಡಿದರು.

Edited By : Vijay Kumar
Kshetra Samachara

Kshetra Samachara

21/01/2021 10:36 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ