ಮುಲ್ಕಿ: ಮಂಗಳೂರು ನಗರ ಹೊರವಲಯದ ಪಳನೀರು ಅಂಗನವಾಡಿ ಕೇಂದ್ರವನ್ನು ನವೀಕರಣ ಮಾಡಿಕೊಟ್ಟು ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಟ್ಟ ಎಂಸಿಎಫ್ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.
ಪಳನೀರಿನಲ್ಲಿ ಎಂಸಿಎಫ್ ವತಿಯಿಂದ 11 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ವಿಶೇಷಚೇತನರಿಗೆ ಕೃತಕ ಅಂಗಾಂಗ ವಿತರಣೆ,ಆರೋಗ್ಯ ತಪಾಸಣೆ ಶಿಬಿರ ಮತ್ತಿತರ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಎಸ್ ಆರ್ ನಿಧಿಯಿಂದ ಮಾಡುತ್ತಾ ಬಂದಿದ್ದಾರೆ. ಸರಕಾರದ ಜತೆ ಕೈ ಜೋಡಿಸಿ ಇಂತಹ ಉತ್ತಮ ಕೆಲಸ-ಕಾರ್ಯಗಳಾದಾಗ ಜನರಿಗೆ ಉತ್ತಮ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಿದೆ ಎಂದರು.
ಈ ಸಂದರ್ಭ ಶಾಸಕರು,ಎಂಸಿಎಫ್ ಅಧಿಕಾರಿಗಳು,ಮನಪಾ ಸದಸ್ಯರಾದ ಸುಮಂಗಲಾ ರಾವ್ ಅವರನ್ನು ಗೌರವಿಸಲಾಯಿತು.
Kshetra Samachara
02/01/2021 04:57 pm