ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬೀದಿ ಬದಿ ವ್ಯಾಪಾರಿಗಳಿಗಾಗಿ ಆತ್ಮನಿರ್ಭರ್ ಸ್ವ-ನಿಧಿ ತರಬೇತಿ

ಮುಲ್ಕಿ: ನಗರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗಾಗಿ ಮುಲ್ಕಿ ನಪಂ ವತಿಯಿಂದ ಬುಧವಾರ ಮುಲ್ಕಿ ಸಮುದಾಯ ಭವನದಲ್ಲಿ ಆತ್ಮ ನಿರ್ಭರ್ ಸ್ವ-ನಿಧಿ ತರಬೇತಿ ಶಿಬಿರ ನಡೆಯಿತು.

ತರಬೇತಿ ಉದ್ಘಾಟಿಸಿದ ಮುಲ್ಕಿ ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರಕಾರ, ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಕೇಂದ್ರ ಸರಕಾರ, ಡೇ-ನಲ್ಮ್ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಮುಲ್ಕಿ ನಪಂ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಈ ತರಬೇತಿ ನಡೆಯಿತು.

ಅಧ್ಯಕ್ಷತೆಯನ್ನು ಮುಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ ಎನ್. ವಹಿಸಿದ್ದರು. ಎಎಸ್ಐ ಸುರೇಶ್ ಕುಂದರ್ ಬೀದಿ ಬದಿ ವ್ಯಾಪಾರಿಗಳ ನಿಯಮಾವಳಿ ಕುರಿತು ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕ ಲತೇಶ್ ಸಾಮಾಜಿಕ ಭದ್ರತೆ ಕುರಿತು ತಿಳಿಸಿದರು.

ಡೇ-ನಲ್ಮ್ ಆಭಿಯಾನದ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ಮತ್ತು ಅಭಿಯಾನ ವ್ಯವಸ್ಥಾಪಕ ವಿಶ್ವನಾಥ್ ರಾವ್, ಆತ್ಮನಿರ್ಭರ್ ಸ್ವ-ನಿಧಿ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ ಹಿರಿಯ ವೈದ್ಯಾಧಿಕಾರಿ ಡಾ.ಸುನಿಲ್ ಜತ್ತನ್ನ ಕೊರೊನಾ ಮುಂಜಾಗ್ರತೆ ಕುರಿತು ತಿಳಿಸಿದರು.

ಈ ಸಂದರ್ಭ ಬೀದಿ ಬದಿ ವ್ಯಾಪಾರಿಗಳಿಗೆ ನಪಂ ವತಿಯಿಂದ ಗುರುತುಚೀಟಿ ವಿತರಿಸಲಾಯಿತು. ನಪಂ ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್ ಚಿತ್ರಾಪು ಮತ್ತು ದಯಾವತಿ ಅಂಚನ್ ಉಪಸ್ಥಿತರಿದ್ದರು. ಭರತಾಂಜಲಿ ಎಸ್ಎಚ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Edited By :
Kshetra Samachara

Kshetra Samachara

07/10/2020 07:57 pm

Cinque Terre

4.53 K

Cinque Terre

0

ಸಂಬಂಧಿತ ಸುದ್ದಿ