ಮುಲ್ಕಿ: ಕೊರೊನಾ ಮಹಾಮಾರಿಯ ಎರಡನೇ ಹಂತದ ಹರಡುವಿಕೆ ತಡೆಯಲು ಶಿವಳ್ಳಿ ಸ್ಪಂದನ ಪಾವಂಜೆ ಸಮಾಜ ಬಾಂಧವರಿಂದ ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು.
ಶಿವಳ್ಳಿ ಸ್ಪಂದನದ ಪದಾಧಿಕಾರಿಗಳು ಹಾಗೂ ಅರ್ಚಕ ಗಣೇಶ್ ಭಟ್ ಮೂಡುಮನೆ ಮಾತನಾಡಿ, ರಾಷ್ಟ್ರ ಕೊರೊನಾ ಎರಡನೇ ಹಂತದ ಭೀತಿ ಎದುರಿಸುತ್ತಿದ್ದು, ಸರಕಾರದ ನೀತಿ ನಿಯಮ ಪಾಲಿಸುವುದರ ಮೂಲಕ ಮುಂಬರುವ ಹಬ್ಬ-ಹರಿದಿನಗಳಲ್ಲಿ ಸ್ವಚ್ಛತೆ ಪಾಲಿಸಿಕೊಂಡು ಕೊರೊನಾ ದೂರ ಮಾಡಲು ಪಣ ತೊಡಬೇಕು ಎಂದರು.
ಈ ಸಂದರ್ಭ ದೇವಳದ ಪ್ರಬಂಧಕ ಗುರು ಭಟ್, ಶಿವಳ್ಳಿ ಸ್ಪಂದನದ ಮಾಧ್ಯಮ ಪ್ರತಿನಿಧಿ ಹಾಗೂ ಎಸ್ ಕೆಪಿಎ ನಿರ್ದೇಶಕ ಪಾವಂಜೆ ಮೋಹನ್ ರಾವ್ ಉಪಸ್ಥಿತರಿದ್ದರು.
Kshetra Samachara
30/11/2020 06:49 pm