ಮುಲ್ಕಿ: ಸಮೀಪದ ಕಿಲ್ಪಾಡಿ ಗ್ರಾಮ ಸಭಾಭವನದಲ್ಲಿ ವಿಶ್ವಾಸ್ ಆಂದೋಲನ ,ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆ ನಡೆಯಿತು.
ಸಭೆಯಲ್ಲಿ ಹನ್ನೊಂದು ತಿಂಗಳ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ಸಂಪೂರ್ಣ ಸಹಕಾರ ನೀಡಿದ ಮಾಜಿ ಪಂಚಾಯತ್ ಸದಸ್ಯ ಅಬ್ದುಲ್ ಶರೀಫ್ ರವರನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯಿತಿಯ ಅಧ್ಯಕ್ಷರಾದ ಲೀಲಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸುರಕ್ಷತೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದ್ದು ಕೊರೋನಾ ನಿಯಂತ್ರಣಕ್ಕೆ ವ್ಯಾಕ್ಸಿನ್, ಮಾಸ್ಕ್, ಸಾಮಾಜಿಕ ಅಂತರ ಮೂರನ್ನು ಪಾಲಿಸಿಕೊಂಡು ಸುರಕ್ಷಿತವಾಗಿರಿ ಎಂದರು.
ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಆಶಾ ಕಾರ್ಯಕರ್ತೆ ಸುಜಾತ ಹಾಗೂ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು ಆಶಾಕಾರ್ಯಕರ್ತೆ ಸುಪ್ರಭಾ ಸ್ವಾಗತಿಸಿದರು .ಮಂಜುಳಾ ಧನ್ಯವಾದ ಅರ್ಪಿಸಿದರು.
Kshetra Samachara
08/01/2022 02:12 pm