ಮಂಗಳೂರು: ರಾಜ್ಯದ ಮೊದಲ 'ಚಾಕಲೇಟ್ ಥೀಮ್ ಪಾರ್ಕ್' ಪುತ್ತೂರಿನಿಂದ 20 ಕಿ.ಮೀ ದೂರದಲ್ಲಿರುವ ಕಾವು ಎಂಬಲ್ಲಿ ನಿರ್ಮಾಣವಾಗಲಿದೆ.
ಕಾವುನಲ್ಲಿ ಈಗಾಗಲೇ ಅಡಕೆ ಮತ್ತು ಕೋಕೊ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಂಸ್ಥೆ (ಕ್ಯಾಂಪ್ಕೋ)ದ ಚಾಕಲೇಟ್ ತಯಾರಿಕಾ ಕಾರ್ಖಾನೆ ಇದೆ. ಇಲ್ಲಿ 23 ಬಗೆಯ ಚಾಕಲೇಟ್‌ಗಳನ್ನು ತಯಾರಿಸಲಾಗುತ್ತಿದ್ದು, ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಇದೇ ಸಂಸ್ಥೆಗೆ ಸೇರಿದ 12 ಎರಕೆ ಜಮೀನಿನ ಪೈಕಿ ಮೂರು ಎಕರೆ ಜಾಗದಲ್ಲಿ ಚಾಕಲೇಟ್ ಉದ್ಯಾನ ತಲೆ ಎತ್ತಲಿದೆ.
ಚಾಕಲೇಟ್ ಥೀಮ್ ಪಾರ್ಕ್‌ನಲ್ಲಿ ಮಕ್ಕಳ ಆಟದ ಸ್ಥಳ, ಕೃತಕವಾಗಿ ನಿರ್ಮಿಸಲಾದ ಜಲಪಾತ, ರೆಸ್ಟೋರೆಂಟ್, ಹೋಟೆಲ್‌ಗಳು ಸೇರಿ ಇನ್ನಿತರ ಆಧುನಿಕ ಸೌಲಭ್ಯಗಳು ಇರಲಿವೆ. ಇದರ ಜತೆ ಅಡಿಕೆ, ತೆಂಗು, ಕೋಕೋ, ಕರಿ ಮೆಣಸು ಉತ್ಪಾದನೆ ಕುರಿತ ಗಾರ್ಡನ್ ಕೂಡ ಇರಲಿದೆ. ಪ್ರವಾಸಿಗರು ಇಲ್ಲಿ ಸಮಯ ಕಳೆಯುವುದರ ಜೊತೆಗೆ ಚಾಕಲೇಟ್ ತಯಾರಿಸುವ ಪ್ರಕ್ರಿಯೆಯನ್ನೂ ನೋಡಬಹುದಾಗಿದೆ.
Kshetra Samachara
18/01/2021 11:30 am