ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಅನುಮೋದನೆಗೆ ಕುರಿತಂತೆ ನ್ಯಾ.ನಾಗಮೋಹನ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದರು. ಮಾತನಾಡಿ, ಸರ್ವ ಪಕ್ಷದ ಸಭೆಯಲ್ಲಿ ನಡೆದ ಚರ್ಚೆಯಂತೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಾಹಮೋಹನ್ ದಾಸ್ ಆಯೋಗದ ಶಿಫಾರಸನ್ನು ಯಥಾವತ್ತಾಗಿ ಒಪ್ಪಿಕೊಂಡಿದ್ದೇವೆ. ಈ ಮೂಲಕ ಎಸ್ ಸಿ ಗೆ 17% ಎಸ್ ಟಿ ಗೆ ಶೇ 7 ಹೆಚ್ಚಳ ಮಾಡಿ ನಿರ್ಧಾರ ಮಾಡಲಾಗಿದೆ ಎಂದರು.
ಈ ಬಗ್ಗೆ ಸರ್ಕಾರಿ ಆದೇಶ ಮಾಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ. ಇದನ್ನು ಜಾರಿಗೆ ಹೇಗೆ ತರಲಾಗುತ್ತದೆ ಎಂಬ ಬಗ್ಗೆ ಸರ್ಕಾರದ ಆದೇಶದಲ್ಲಿ ವಿವರವಾಗಿ ತಿಳಿಸಲಾಗುತ್ತದೆ ಎಂದರು.ಇತರ ಸಮುದಾಯದಿಂದ ಮೀಸಲಾತಿ ಬೇಡಿಕೆ ಬಗ್ಗೆ ನಮ್ಮ ಮುಂದೆ ಬೇಕಾದಷ್ಟು ಮನವಿಗಳು ಇದೆ. ಒಬಿಸಿ ಹಾಗೂ ಎಸ್ ಟಿ ಸೇರ್ಪಡೆಗೆ ಬೇಡಿಕೆ ಇದೆ. ಈ ಬಗ್ಗೆ ಚರ್ಚೆ ಮಾಡಿ ಒಟ್ಟು ಮೀಸಲಾತಿ ಎಷ್ಟಾಗುತ್ತದೆ ಎಂಬ ನಿರ್ಧಾರಕ್ಕೆ ಬರಬೇಕಿದೆ ಎಂದರು.
ಬೇರೆ ಸಮುದಾಯದ ಮೀಸಲಾತಿ ಬಗ್ಗೆ ಯಾವುದೇ ಆಯೋಗದ ವರದಿ ಇಲ್ಲದೆ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಎಸ್ ಟಿ ಎಸ್ ಸಿ ಬಗ್ಗೆ ಮೂರ್ನಾಲ್ಕು ಆಯೋಗದ ವರದಿಗಳು ಇದ್ದವು. ಈ ಪೈಕಿ ನಾಗಮೋಹನ್ ದಾಸ್ ವರದಿ ವೈಜ್ಞಾನಿಕವಾಗಿ ಇದ್ದ ಹಿನ್ನಲೆಯಲ್ಲಿ ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.
PublicNext
08/10/2022 03:32 pm