ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಬೆಂಗಾವಲು ಪಡೆಯಲ್ಲಿ ಚಲಿಸುತ್ತಿದ್ದ ಕಾರಿನಿಂದ ಮಹಿಳಾ ಪೇದೆಯೊಬ್ಬರು ಕೆಳಗೆ ಬಿದ್ದಿದ್ದಾರೆ. ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಇತ್ತೀಚಿನ ವಾರಂಗಲ್ ಭೇಟಿಯ ವೇಳೆ ಈ ಘಟನೆ ನಡೆದಿದೆ. ವಿಡಿಯೋದಲ್ಲಿ, ಕಾನ್‌ಸ್ಟೆಬಲ್ ಕಾರಿನಿಂದ ಬೀಳುವುದನ್ನು ಕಾಣಬಹುದು ಮತ್ತು ನಂತರ ಎದ್ದು ವಾಹನದ ಹಿಂದೆ ಓಡುವುದನ್ನು ಕಾಣಬಹುದಾಗಿದೆ.
PublicNext
02/10/2022 06:12 pm