ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.27ರಿಂದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ವಿಚಾರಣೆ ನೇರ ಪ್ರಸಾರ ಆರಂಭ

ನವದೆಹಲಿ: ಮುಂದಿನ ವಾರದಿಂದ ಸುಪ್ರೀಂ ಕೋರ್ಟ್‌ನಲ್ಲಿನ ಎಲ್ಲಾ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ನೇರಪ್ರಸಾರ ಮಾಡಲಾಗುತ್ತದೆ.

ಮಂಗಳವಾರ ನಡೆದ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರ ಸಭೆಯಲ್ಲಿ, ಸೆಪ್ಟೆಂಬರ್ 27ರಿಂದ ಸಂವಿಧಾನ ಪೀಠದ ಪ್ರಕರಣಗಳ ನೇರ ಪ್ರಸಾರವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಯು.ಯು ಲಲಿತ್ ಅವರು ಕರೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ನೇರಪ್ರಸಾರ ವೀಕ್ಷಿಸಲು ಶೀಘ್ರದಲ್ಲೇ ಸಾಧ್ಯವಾಗಲಿದೆ. ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ಪ್ರಕರಣಗಳೊಂದಿಗೆ ನೇರ ಪ್ರಸಾರ ಪ್ರಾರಂಭವಾಗುತ್ತದೆ. ನಂತರ ಇತರ ಪ್ರಕರಣಗಳಿಗೂ ಆರಂಭಿಸಲಾಗುವುದು.

2018ರಲ್ಲಿ ಪ್ರಕರಣವೊಂದರ ವಿಚಾರಣೆಯ ನೇರ ಪ್ರಸಾರವನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ನಂತರ ನ್ಯಾಯಾಲಯದ ನೋಂದಣಿ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲು ಕೇಳಲಾಗಿತ್ತು. ಕೊರೊನಾ ಸಮಯದಲ್ಲಿ ಸುಪ್ರೀಂ ಕೋರ್ಟ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ಪ್ರಾರಂಭಿಸಿತು. ಆದರೆ ಅದನ್ನು ಸಾಮಾನ್ಯ ಜನರಿಗೆ ನೇರ ಪ್ರಸಾರ ಮಾಡಲಿಲ್ಲ. ಇದೀಗ ನ್ಯಾಯಾಲಯದ ಆದೇಶದ 4 ವರ್ಷಗಳ ನಂತರ ಕಾಲ ಕೂಡಿಬಂದಿದೆ.

Edited By : Vijay Kumar
PublicNext

PublicNext

22/09/2022 03:07 pm

Cinque Terre

19.65 K

Cinque Terre

0