ನವದೆಹಲಿ : ಇಂದು ದೇಶಾದ್ಯಂತ ಆದಾಯ ತೆರಿಗೆ ಇಲಾಖೆ ಕಾರ್ಯೋನ್ಮುಖವಾಗಿದೆ. ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ಛತ್ತೀಸ್ ಗಢ, ಉತ್ತರಾಖಂಡ ಮತ್ತು ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ತಂಡ ಹಲವು ದೊಡ್ಡ ಉದ್ಯಮಿಗಳ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಐಟಿ ಅಧಿಕಾರಿಗಳು ಈ ಕಾರ್ಯಾಚರಣೆಗಾಗಿ 100ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಬಳಕೆ ಮಾಡಿಕೊಂಡಿವೆ.
ಮುಂಬೈ, ರಾಜಸ್ಥಾನ, ಉತ್ತರಖಂಡ, ದೆಹಲಿ ಮತ್ತು ರಾಜಸ್ಥಾನದಲ್ಲಿ ಮಧಾಹ್ನದ ಬಿಸಿಯೂಟದ ಭ್ರಷ್ಟಾಚಾರಕ್ಕಾಗಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಮಣಿಪಾಲ್ ಸಂಸ್ಥೆ ಮೇಲೂ ದಾಳಿ ನಡೆದಿದ್ದು, ಉಡುಪಿ ಮತ್ತು ಮಂಗಳೂರಿನ ಕಚೇರಿಗಳಲ್ಲೂ ಶೋಧ ಕಾರ್ಯಾಚರಣೆ ನಡೆದಿದೆ.
ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಾಹನಗಳನ್ನು ಬಳಸಿಕೊಂಡು ಆಗಮಿಸಿದ ಅಧಿಕಾರಿಗಳು, ಮಣಿಪಾಲ್ ಗ್ರೂಪ್ನ ಹಣಕಾಸು ವಿಭಾಗದಲ್ಲಿ ಶೋಧ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಖ್ ಗೆಲ್ಹೋಟ್ ಅವರ ಅಪ್ತ ಸಚಿವ ರಾಜೇಂದ್ರ ಯಾದವ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಒಟ್ಟು ಕಾರ್ಯಾಚರಣೆಗೆ ಸಿಆರ್ ಪಿಎಫ್ ನ ಭದ್ರತೆ ಆಯೋಜನೆ ಮಾಡಲಾಗಿತ್ತು. ಹಲವಾರು ವ್ಯಾಪಾರೋದ್ಯಮ ಸಂಸ್ಥೆಗಳ ಮೇಲೆ ಮುಗಿಬಿದ್ದಿರುವ ಐಟಿ ಅಧಿಕಾರಿಗಳು, ತೆರಿಗೆ ವಂಚನೆಯ ಸುಳಿವಿನ ಬೆನ್ನತ್ತಿದ್ದಾರೆ.
PublicNext
07/09/2022 04:26 pm