ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರ್ಗಿ : ದಲಿತ ಸಂಘಟನೆ- ಶ್ರೀರಾಮ ಸೇನೆ ವಾಕ್ಸಮರ; ಪೊಲೀಸರ ಸಮಾಧಾನ

ಕಲಬುರ್ಗಿ : ಇಂದು ಕಲಬುರ್ಗಿ ಜಿಲ್ಲೆಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾ‌ ನಿರ್ದೇಶಕ ಅಲೋಕ್‌ ಕುಮಾರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶ್ರೀರಾಮ ಸೇನೆ ಮತ್ತು ದಲಿತ ಸಂಘಟನೆ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು.

ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯು ದಲಿತ ಸಂಘಟನೆಯವರು ಕೋಮು ಗಲಭೆಗೆ ಪ್ರಚೋದಿಸುತ್ತಿದ್ದಾರೆಂದು ಅಲೋಕ್ ಕುಮಾರ್ ಮುಂದೆಯೇ ದೂರು ನೀಡಿದರು. ಈ ವೇಳೆ ದಲಿತ ಸಂಘಟನೆಯವರು ಎದ್ದು ನಿಂತು ಶ್ರೀರಾಮ ಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ನಮ್ಮ ಸಂಘಟನೆಯ ಹೆಸರನ್ನು ಯಾಕೆ ಪ್ರಸ್ತಾಪಿಸಿದ್ದು ಅಂತ ಅಲೋಕ್ ಕುಮಾರ್ ಮುಂದೆಯೇ ತರಾಟೆಗೆತ್ತಿಕೊಂಡ ದಲಿತ ಸಂಘಟನೆ ಮುಖಂಡರು, ಕೂಡಲೇ ಶ್ರೀರಾಮ ಸೇನೆಯ ಕಾರ್ಯಕರ್ತ ಮಹೇಶ್ ರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಕೂಡಲೇ ಪೊಲೀಸರು ಮಹೇಶ್ ರನ್ನು ಸಭೆಯಿಂದ ಹೊರಗೆ ಕರೆದೊಯ್ದರು.

Edited By :
PublicNext

PublicNext

19/07/2022 08:21 am

Cinque Terre

30.02 K

Cinque Terre

1

ಸಂಬಂಧಿತ ಸುದ್ದಿ