ಬೆಂಗಳೂರು:ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಲಂಚ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಮಂಜುನಾಥ್ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮೇಲ್ನೋಟಕ್ಕೆ ನಗರ ಜಿಲ್ಲಾಧಿಕಾರಿ ಮತ್ತು ಇತರೆ ಇಬ್ಬರು ಡಿ.ಸಿ.ಕಚೇರಿ ಸಿಬ್ಬಂದಿ ಲಂಚ ಪಡೆದ ಪಾತ್ರದ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಮಂಜುನಾಥ್ ರನ್ನ ಎಸಿಬಿ ಬಂಧಿಸಿತ್ತು. ನಂತರ ನ್ಯಾಯಾದೀಶರ ಮುಂದೆ ಹಾಜರು ಪಡಿಸಿ ವಿಚಾರಣೆ ನಡೆಸಲಾಯ್ತು.
ಈ ಲಂಚ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಸರ್ಕಾರ ಇದೀಗ ಮಂಜುನಾಥ್ ಅವರನ್ನು ಅಮಾನತ್ತುಗೊಳಿಸಿ ಆದೇಶಿದೆ ಜಾರಿ ಮಾಡಿದೆ.
PublicNext
05/07/2022 08:15 am