ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ-ಉಲ್ಲಂಘಿಸಿದರೆ ಬೀಳುತ್ತೆ ದಂಡ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದಿನಿಂದಲೇ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನ ಜಾರಿಗೆ ತಂದಿದ್ದು ನಿಯಮ ಮೀರಿದರೆ, ದಂಡ ಬೀಳೋದು ಗ್ಯಾರಂಟಿ.

ಹೌದು. ಈ ವಿಚಾರವಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿಯೇ ಬಿಬಿಎಂಪಿ ಇಂದಿನಿಂದಲೇ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನ ಇಂದಿನೀಂದಲೇ ಜಾರಿ ಮಾಡಿದೆ.

10 ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಸುವಂತಿಲ್ಲ. ಕೇಂದ್ರದ ಈ ಆದೇಶ ಕಳೆದ ವರ್ಷವೇ ಜಾರಿ ಆಗಿದೆ. ಆದರೆ, ಕಟ್ಟುನಿಟ್ಟಾಗಿ ಈ ಆದೇಶವನ್ನ ಯಾರೂ ಪಾಲಿಸಲಿಲ್ಲ. ಈಗ ಬಿಬಿಎಂಪಿ ಅದನ್ನ ಎಲ್ಲ ವಲಯದಲ್ಲೂ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ. ಇಂದಿನಿಂದಲೇ ಅದು ಜಾರಿ ಕೂಡ ಆಗಿದೆ.

Edited By :
PublicNext

PublicNext

01/07/2022 02:28 pm

Cinque Terre

25.63 K

Cinque Terre

0