ಲಕ್ನೋ: ದೇಶದಲ್ಲಿ ‘ಅಗ್ನಿಪಥ್’ ಯೋಜನೆ ಹಿನ್ನೆಲೆಯಲ್ಲಿ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಈ ಯೋಜನೆಯ ವಿರುದ್ಧ ಉತ್ತರ ಪ್ರದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹಲವಾರು ಸ್ಥಳಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಲಾಗಿದೆ.
ಸದ್ಯ ಇಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದವರ ಮನೆಗಳನ್ನು ಬುಲ್ಡೋಜರ್ ಗಳಿಂದ ಧ್ವಂಸಗೊಳಿಸಿ ಯೋಗಿ ಸರ್ಕಾರ ಈಗಾಗಲೇ ಬಿಸಿ ಮುಟ್ಟಿಸಿತ್ತು. ಈ ಬಾರಿ ವಾರಣಾಸಿ ಆಡಳಿತ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಆಸ್ತಿಯನ್ನು ನಾಶಪಡಿಸಿದವರಿಂದ ಪರಿಹಾರವನ್ನು ವಸೂಲಿ ಮಾಡುವುದಾಗಿ ಹೇಳಿದೆ.
ವಾರಣಾಸಿ ಆಡಳಿತ ಅಗ್ನಿಪಥ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದೆ. ಈ ಕೆಲಸ ಮುಗಿದ ಬಳಿಕ ಹಾನಿಯಾದ ಸಾರ್ವಜನಿಕ ಆಸ್ತಿಯನ್ನು ಸರಿಪಡಿಸಲು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಲಿದೆ ಎಂದು ತಿಳಿಸಿದೆ.
PublicNext
22/06/2022 09:19 am