ಲಕ್ನೊ: ಜ್ಞಾನವಾಪಿ ಮಸೀದಿ ಸಂಬಂಧ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿರೋ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಇಂದು ಈ ಕುರಿತು ತೀರ್ಪು ಪ್ರಕಟಿಸಿಲಿದೆ.
ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಡೆಸುವಂತೆ ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಈ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿಯೇ ಜಿಲ್ಲಾ ನ್ಯಾಯಾಲಯ ಈಗ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ತೀರ್ಪು ನೀಡಲಿದೆ.
ಹಿಂದೂಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ಮೊದಲು ನಡೆಸಬೇಕೆ ? ಇಲ್ಲವೇ ಮುಸ್ಲಿಮರು ಸಲ್ಲಿಸಿದ ಅರ್ಜಿ ವಿಚಾರಣೆ ಮೊದಲು ನಡೆಸಬೇಕೆ ಎಂಬುದನ್ನೇ ಜಿಲ್ಲಾ ನ್ಯಾಯಾಲಯ ಇವತ್ತು ಹೇಳಿದೆ.
ಜ್ಞಾನವಾಪಿ ಮಸೀದಿಯಲ್ಲಿ ದೇವತೆಗಳ ವಿಗ್ರಹಗಳಿವೆ. ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಹಿಂದೂ ಮಹಿಳೆಯರು ಸಿವಿಲ್ ಅರ್ಜಿಯನ್ನ ಸಲ್ಲಿಸಿದ್ದಾರೆ.
ಮಸೀದಿಯಲ್ಲಿ ಹಲವು ದಶಕಗಳಿಂದಲೂ ನಮಾಜ್ ಮಾಡಲಾಗುತ್ತಿದೆ. 1991ರ ಪೂಜಾ ಕಾಯ್ದೆ ಅನ್ವಯ ಸಿವಿಲ್ ದಾವೆ ಹೂಡಲು ಆಗೋದೇ ಇಲ್ಲ. ಹಾಗಾಗಿಯೇ ಹಿಂದೂಗಳ ಅರ್ಜಿ ವಜಾಗೊಳಿಸಿ ಅಂತಲೇ ಮುಸ್ಲಿಮರು ಅರ್ಜಿ ಸಲ್ಲಿಸಿದ್ದಾರೆ.
PublicNext
24/05/2022 09:36 am