ನವದೆಹಲಿ: ಹೈದ್ರಾಬಾದ್ ಪಶುವೈದ್ಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ವೈದ್ಯಯ ದೇವಹನ್ನ ಪಾಪಿಗಳು ಸುಟ್ಟು ಹಾಕಿದ್ದರು. ಆದರೆ, ಈ ಆರೋಪಿಗಳು ಪೊಲೀಸರ ಅನೌಕಂಟರ್ ನಲ್ಲಿಯೇ ಸತ್ತು ಹೋದರು. ಈ ಒಂದು ಎನ್‌ಕೌಂಟರ್ ಅನ್ನ ಉದ್ದೇಶ ಪೂರ್ವಕವಾಗಿಯೇ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಆಯೋಗ ಈಗ ತಿಳಿಸಿದೆ.
ಈ ಕುರಿತು ಈಗ ವರದಿ ಸಲ್ಲಿಸಿದ ಆಯೋಗದಲ್ಲಿ ಸಿಬಿಐನ ಮಾಜಿ ನಿರ್ದೇಶಕ ಡಾ.ಕಾರ್ತಿಕೇಯನ್, ಬಾಂಬೆ ಹೈಕೋರ್ಟ್ ನಿವೃತ ನ್ಯಾಯಮೂರ್ತಿ ರೇಖಾ ಬಲ್ಡೋಟಾ, ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಸಿರ್ಪುರ್ಕರ್ ಇದ್ದಾರೆ.
ಎನ್‌ಕೌಂಟರ್ ನಲ್ಲಿ ಸತ್ತವರಲ್ಲಿ ನಾಲ್ವರಲ್ಲಿ ಮೂವರು ಅಪ್ರಾಪ್ತರು. ಈ ಹಿನ್ನೆಲೆಯಲ್ಲಿಯೇ 10 ಪೊಲೀಸರನ್ನು ಕೊಲೆ ಆರೋಪದಡಿ ವಿಚಾರಣೆ ನಡೆಸಬೇಕು ಎಂದು ಆಯೋಗ ತಿಳಿಸಿದೆ.
PublicNext
21/05/2022 11:44 am