ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಬಿಬಿಎಸ್ ಮೌಲ್ಯಮಾಪಕರ ವಿರುದ್ಧ ಹೈಕೋರ್ಟ್ ಗರಂ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಪರೀಕ್ಷಕರ ವಿರುದ್ಧ ಹೈಕೋರ್ಟ ಗರಂ ಆಗಿದೆ. ಪದೇ ಪದೇ ನಿಯಮ ಉಲ್ಲಂಘಿಸುವ ಇವರನ್ನ ಕಪ್ಪುಪಟ್ಟಿಗೆ ಸೇರಿಸುವಂತೆ ಆದೇಶ ನೀಡಿದೆ.

ಪರೀಕ್ಷಕರು ವೈದ್ಯಕೀಯ ಪರೀಕ್ಷೆ ನಡೆಸಲು ಮಾರ್ಗಸೂಚಿಗಳನ್ನ ಪಾಲಿಸಲೇಬೇಕು. ಆದರೆ ಅವುಗಳನ್ನ ಇವರು ಉಲ್ಲಂಘಿಸುತ್ತಿದ್ದಾರೆ. ಇಂತಹ ಉಲ್ಲಂಘನೆಯನ್ನ ಸಹಿಕೊಳ್ಳಲು ಆಗೋದಿಲ್ಲ.ವಿಶ್ವ ವಿದ್ಯಾಲಯವು ಮುನ್ನೆಚ್ಚರಿಕೆ ಕ್ರಮವನ್ನ ತೆಗೆದುಕೊಳ್ಳಲೇಬೇಕು. ಈ ರೀತಿಯ ಉಲ್ಲಂಘನೆ ಆಗದಂತೆ ಖಾತ್ರಿಪಡಿಸಬೇಕು ಅಂತಲೇ ಆದೇಶ ಮಾಡಿದೆ.

ನಾಲ್ಕನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ದಾಸರಿ ಚಕ್ರಧರ್ ಮತ್ತು ಶಶಿಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ್ ನ್ಯಾಯಪೀಠ ಈ ಆದೇಶ ಕೊಟ್ಟಿದೆ.

Edited By :
PublicNext

PublicNext

26/03/2022 10:07 pm

Cinque Terre

79.3 K

Cinque Terre

1