ಬೆಂಗಳೂರು: ಮದುವೆ ಅನ್ನೋದು ಒಂದು ಸುಂದರ ಮತ್ತು ಅದ್ಭುತ ವ್ಯವಸ್ಥೆ. ಆದರೆ ಅದನ್ನೇ ಒಂದು ರೀತಿ ಅತ್ಯಾಚಾರಕ್ಕೆ ಲೈಸೆನ್ಸ್ ಅಂದು ಕೊಂಡ್ರೆ ಹೇಗೆ..? ಈಗ ಹೈಕೋರ್ಟ್ ಈ ವಿಚಾರವಾಗಿಯೇ ಒಂದು ಮಹತ್ವದ ತೀರ್ಪು ನೀಡಿದೆ.
ವಿವಾಹ ಅನ್ನೋದು ಪತಿ, ಪತ್ನಿ ಮೇಲೆ ಮಾಡುವ ಅತ್ಯಾಚಾರಕ್ಕೆ ಲೈಸನ್ಸ್ ಅಲ್ಲವೇ ಅಲ್ಲ. ಅಂತಹ ಪತಿಗೆ ಯಾವುದೇ ವಿನಾಯಿತಿನೂ ಇರಬಾರದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ತನ್ನ ಪತ್ನಿ ತನ್ನ ವಿರುದ್ಧ ಹೂಡಿರೋ ಅತ್ಯಾಚಾರ ಪ್ರಕರಣವನ್ನ ರದ್ದುಗೊಳಿಸಬೇಕು ಎಂದು ಕೇಳಿದ್ದ ಪತಿಯ ಅರ್ಜಿಯನ್ನ ಹೈಕೋರ್ಟ್ ಈಗ ವಜಾಗೊಳಿಸಿದೆ.
ಬೆಂಗಳೂರಿನ ಅಭಿಷೇಕ್ ಎಂಬುವವರು ಸಲ್ಲಿಸಿರೋ ಅರ್ಜಿಯನ್ನ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಏಕಸದಸ್ಯ ಪೀಠ ಈ ಅರ್ಜಿ ವಜಾಗೊಳಿಸಿದೆ. ಅತ್ಯಾಚಾರ ಆರೋಪಿ ಪತಿನೇ ಆಗಿದ್ರೂ ಸರಿಯೇ, ಯಾವುದೇ ವಿನಾಯಿತಿ ಕೊಡಲೇಬಾರದು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
PublicNext
24/03/2022 09:53 am