ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿಯ ಜಾತಿ ಪತ್ನಿಗೆ ವರ್ಗಾವಣೆ ಆಗೋದಿಲ್ಲ; ಹೈಕೋರ್ಟ್

ಬೆಂಗಳೂರು: ಮದುವೆ ಆದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆ ಆಗೋದಿಲ್ಲ ಅನ್ನೋ ಮಹತ್ವದ ಆದೇಶವನ್ನ ಈಗ ಹೈಕೋರ್ಟ್ ನೀಡಿದೆ.

ಗ್ರಾಮ ಪಂಚಾಯತ್ ಸದಸ್ಯೆ ಒಬ್ಬರು ಎಸ್‌ಟಿ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಪತಿಯ ಪರಿಶಿಷ್ಟ ವರ್ಗ ತನಗೂ ಅನ್ವ ಆಗುತ್ತದೆ ಅಂತಲೂ ವಾದಿಸಿದ್ದರು.

ಆದರೆ, ಸಿವಿಲ್ ಕೋರ್ಟ್ ಆರಂಭದಲ್ಲಿಯೇ ಇದನ್ನ ಅಸಿಂಧುಗೊಳಿಸಿತ್ತು. ಇದನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಸದಸ್ಯೆಗೆ ಇಲ್ಲೂ ನಿರಾಶೆ ಆಗಿದೆ. ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ. ಹೊರತು ಪತಿಯ ಜಾತಿ ಪತ್ನಿಗೆ ವರ್ಗ ಆಗೋದಿಲ್ಲ ಅಂತಲೇ ಗ್ರಾಮ ಪಂಚಾಯತ್ ಸದಸ್ಯೆಯ ವಾದವನ್ನ ತಿರಸ್ಕರಿಸಿದೆ.

Edited By :
PublicNext

PublicNext

23/03/2022 09:50 am

Cinque Terre

42.83 K

Cinque Terre

2