ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ವಿವಾದ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ

ಬೆಂಗಳೂರು: ಕಳೆದ 7 ದಿನಗಳಿಂದ ಹಿಜಾಬ್ ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿ ಒಳಗೊಂಡ ತ್ರಿಸದಸ್ಯ ಪೂರ್ಣ ಪೀಠದ ಕೈಗೆತ್ತಿಕೊಂಡಿದೆ. ಈಗಾಗಲೇ ಅರ್ಜಿದಾರರ ಪರ ವಾದ ಮಂಡನೆಯ ನಂತರ, ಇಂದು ಮತ್ತೆ ಪುನಾರಂರಭಗೊಂಡ ಅರ್ಜಿಯ ವಿಚಾರಣೆ ವೇಳೆ, ನ್ಯಾಯಪೀಠದ ಮುಂದೆ ಸರ್ಕಾರದ ಪರ ಅಡ್ವಕೇಜ್ ಜನರಲ್ ವಾದ ಮಂಡನೆ ಮಾಡಿದರು. ರಾಜ್ಯ ಸರ್ಕಾರದ ವಾದ ಆಲಿಸಿದಂತ ನ್ಯಾಯಪೀಠವು, ಅರ್ಜಿಯ ವಿಚಾರಣೆಯನ್ನು ಮತ್ತೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.

ವಿಚಾರಣೆಯ 7ನೇ ದಿನವಾದ ಇಂದು ಹೈಕೋರ್ಟ್‌ನಲ್ಲಿ ಮಧ್ಯಾಹ್ನ 2.30ಕ್ಕೆ ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಆರಂಭಿಸಿತು. ಹೈಕೋರ್ಟ್ ಪೂರ್ಣ ಪೀಠದ ಮುಂದೆ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಮಧ್ಯಸ್ಥಿಕೆದಾರರ ಪರವಾಗಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸಿಜೆ ಇದೀಗ ನ್ಯಾಯಾಲಯವು ಯಾವುದೇ ಮಧ್ಯಸ್ಥಿಕೆದಾರನನ್ನು ಕೇಳುವುದಿಲ್ಲ ಮತ್ತು ಪ್ರತಿವಾದಿಗಳ ವಾದಗಳ ನಂತರ ಅಗತ್ಯವಿದ್ದರೆ ಅವರ ಸಹಾಯವನ್ನು ಕೋರುತ್ತದೆ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/02/2022 06:27 pm

Cinque Terre

81.29 K

Cinque Terre

6

ಸಂಬಂಧಿತ ಸುದ್ದಿ