ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

21 ವಯಸ್ಸಿನೊಳಗೆ ಮದುವೆ ಆಗಬಾರದು, 'ಲಿವ್ ಇನ್‌'ನಲ್ಲಿ ಇರಬಹುದು: ಪಂಜಾಬ್ ಹೈಕೋರ್ಟ್

ಚಂಡೀಗಢ: ಸದ್ಯದ ಹಿಂದೂ ವಿವಾಹ ಕಾಯ್ದೆ ಪ್ರಕಾರ ಗಂಡಿನ ವಯಸ್ಸು 21. ಆದರೆ ಅವನು ಇಚ್ಛಿಸಿದಲ್ಲಿ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಕೂಡಿ ಇರಬಹುದು(ಲಿವ್ ಇನ್ ರಿಲೇಷ‌ನ್‌ಶಿಪ್) ಎಂದು ಪಂಜಾಬ್ ಮತ್ತು ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ‌.

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಜೋಡಿಯೊಂದು ಸಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ರೀತಿ ತೀರ್ಪು ಕೊಟ್ಟಿದೆ. ಸದ್ಯ ಚಾಲ್ತಿಯಲ್ಲಿರುವ ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆ ಆಗಲು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ವಯಸ್ಸಾಗಿರಬೇಕು. ಆದರೆ ಆತ ಬಯಸಿದ್ದಲ್ಲಿ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಕೂಡಿ ಇರಬಹುದು ಎಂದು ಪಂಜಾಬ್ ಹೈಕೋರ್ಟ್ ಹೇಳಿದೆ.

ಗುರುದಾಸ್‌ಪುರದ ಜೋಡಿ 'ಲಿವ್‌ ಇನ್' ಸಂಬಂಧದಲ್ಲಿ ಇದ್ದು,‌‌ ಇದು ಕುಟುಂಬಕ್ಕೆ ಮುಂದೆ ಅಪಾಯ ತಂದೊಡ್ಡಬಹುದು ವಕೀಲರು ನ್ಯಾಯಲಯಕ್ಕೆ ತಿಳಿಸಿದ್ದರು‌. ಆದರೆ ಜೋಡಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ ಜೋಡಿಯ ಪರವಾಗಿ ಈ ರೀತಿ ತೀರ್ಪು ನೀಡಿದೆ‌.

Edited By : Nagaraj Tulugeri
PublicNext

PublicNext

22/12/2021 01:36 pm

Cinque Terre

23.18 K

Cinque Terre

1