ಬೆಂಗಳೂರು:2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲಿ ಅನ್ಯಾಯವಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿದ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತುಮಕೂರು ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಗಂಗಾ ಸ್ವಾಮಿಗಳು ಪತ್ರ ಬರೆದಿದ್ದಾರೆ.
ನೇಮಕಾತಿಯಲ್ಲಿ ಭಾರಿ ಅವ್ಯವಹಾರ ಅಗಿದೆ ಅಂತಲೇ ಹೈಕೋರ್ಟ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನ 2018 ರಲ್ಲಿ ಮಾರ್ಚ್-09 ರಂದು ರದ್ದುಗೊಳಿಸಿ ತೀರ್ಪು ನೀಡಿತ್ತು. ಸುಪ್ರಿಂ ಕೋರ್ಟ್ ಕೂಡ ಈ ತೀರ್ಪನ್ನ ಎತ್ತಿ ಹಿಡಿದು ಸರ್ಕಾರದ ಅರ್ಜಿಯನ್ನ ವಜಾಗೊಳಿಸಿತ್ತು.
2011 ರ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ, 2020 ರಲ್ಲಿ ಬಜೆಟ್ ಅಧಿವೇಶದನಲ್ಲೂ ಚರ್ಚೆ ಆಗಿದೆ.ಮಂತ್ರಿಮಂಡಳದಲ್ಲೂ ವಿಷಯ ಚರ್ಚಿಸಿ ನ್ಯಾಯಕೊಡುವ ಬಗ್ಗೆ ಭರವಸೆ ಕೊಟ್ಟಿತ್ತು. ಆದರೆ ಇಲ್ಲಿವರೆಗೂ ಏನೂ ಬದಲಾಗಿಯೇ ಇಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಈ ಮಸೂದಿಯನ್ನ ಮಂಡಿಸಿ ಅಭ್ಯರ್ಥಿಗಳಿಗೆ ನ್ಯಾಯಕೊಡಿಸಿದರೆ ಸಂತೋಷವಾಗುತ್ತದೆ ಎಂದು ಶ್ರೀಗಳೂ ಪತ್ರದಲ್ಲಿ ಬರೆದಿದ್ದಾರೆ.
ಸಿದ್ದಗಂಗಾ ಶ್ರೀಗಳು ಸಿಎಂ ಗೆ ಪತ್ರ ಬರೆದು ಈಗ ಅತಿ ಹೆಚ್ಚುಚರ್ಚೆಗೆ ಗ್ರಾಸವಾಗಿದ್ದಾರೆ.
PublicNext
18/12/2021 07:30 am