ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನ ಏನು ತಿನ್ನಬೇಕು ಅನ್ನೋದನ್ನ ನಿರ್ಧರಿಸೋಕೆ ನೀವು ಯಾರು-ಗುಜರಾತ್ ಹೈಕೋರ್ಟ್

ಅಹಮದಾಬಾದ್:ಗುಜರಾತ್ ಸರ್ಕಾರ ಬೀದಿ ಬದಿಯಲ್ಲಿ ತಳ್ಳುಗಾಡಿಯಲ್ಲಿ ಮಾಂಸ ಮಾರಾಟ ಮಾಡುವುದನ್ನ ಈಗಾಗಲೇ ನಿ‍ಷೇಧಿಸಿದೆ. ಸರ್ಕಾರದ ಈ ಕ್ರಮವನ್ನ ಹೈಕೋರ್ಟ್ ತರಾಟೆಗೆ ತೆಗಿದುಕೊಂಡು ವಶಪಡಿಸಿಕೊಂಡ ತಳ್ಳುವ ಗಾಡಿಗಳನ್ನ ವಾಪಸ್ ಕೊಡುವಂತೇನೂ ಆದೇಶಸಿದೆ.

ಅಹಮದಾಬಾದ್‌ನ ಪಾಲಿಕೆ ಈಗಾಗಲೇ ಬೀದಿ ಬದಿಯಲ್ಲಿ 25 ವ್ಯಾಪಾರಿಗಳ ಗಾಡಿಗಳನ್ನ ವಶಪಡಿಸಿಕೊಂಡಿದೆ.ಅದಕ್ಕೇನೆ ವ್ಯಾಪಾರಿಗಳು ಸರ್ಕಾರದ ಅನ್ಯಾಯದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ವ್ಯಾಪಾರಿಗಳ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ವವ್, ಪಾಲಿಕೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೀದಿ ಬದಿಯ ವ್ಯಾಪಾರಿಗಳ ಮಾಂಸದ ವ್ಯಾಪಾರ ಬಂದ್ ಮಾಡಿರೋದು ತಪ್ಪು. ಒಂದು ವೇಳೆ ಅವರು ಅತಿಕ್ರಮಣ ಜಾಗದಲ್ಲಿ ವ್ಯಾಪಾರ ಮಾಡಿದ್ದರೇ ತಪ್ಪಾಗುತ್ತದೆ. ಹಾಗಂತ ಬೀದಿ ಬದಿಯ ವ್ಯಾಪಾರವನ್ನ ತಡೆಯೋದು ಎಷ್ಟು ಸರಿ ಅಂತಲೇ ಪ್ರಶ್ನೆ ಮಾಡಿದೆ.

ಒಂದು ವೇಳೆ ಆಡಳಿತ ಪಕ್ಷ ಮೊಟ್ಟೆ ತಿನ್ನೋದನ್ನ ಬಿಟ್ಟಿದ್ದರೇ, ಅಲ್ಲಿಗೆ ಮೊಟ್ಟೆ ಮಾರಾಟವೂ ಬಂದ್ ಆಗಬೇಕೇ ಅಂತಲೂ ಹೈಕೋರ್ಟ್ ಪ್ರಶ್ನಿಸಿದೆ. ಜನ ಏನು ತಿನ್ನಬೇಕು ಅನ್ನೋದನ್ನ ನಿರ್ಧರಿಸೋಕೆ ನೀವು ಯಾರು ಅಂತಲೂ ಕ್ವಶ್ಚನ್ ಕೇಳಿದೆ ಹೈಕೋರ್ಟ್.

Edited By :
PublicNext

PublicNext

10/12/2021 05:15 pm

Cinque Terre

40.91 K

Cinque Terre

22

ಸಂಬಂಧಿತ ಸುದ್ದಿ