ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿನ ಮನೆ ಕಡೆ ಬೆರಳು ಮಾಡಿದ ನೀಚ ಚೀನ

ಜನರಲ್‌ ರಾವತ್‌ ಸಾವಿನಿಂದಾಗಿ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಚೀನ ಸಾವಿನ ಮನೆಯಾಚೆ ನಿಂತು ತುತ್ಛ ಮಾತುಗಳನ್ನಾಡುವ ಮೂಲಕ ತನ್ನ ನೀಚತನವನ್ನು ಪ್ರದರ್ಶಿಸಿದೆ.

ಚೀನ ಸರಕಾರದಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿರುವ “ಗ್ಲೋಬಲ್‌ ಟೈಮ್ಸ್‌’ ಎಂಬ ಪತ್ರಿಕೆ, “ಜನರಲ್‌ ರಾವತ್‌ ಅವರ ಸಾವು, ಭಾರತೀಯ ಪಡೆಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿ­ಸಿದೆ. ಇದಲ್ಲದೆ, ಸುಸಜ್ಜಿತ ವ್ಯವಸ್ಥೆಯನ್ನಾಗಲೀ, ಯುದ್ಧಕ್ಕೆ ಬೇಕಾದ ಪೂರ್ವತಯಾರಿಯನ್ನಾಗಲೀ ಆ ದೇಶ ಹೊಂದಿಲ್ಲ ಎಂಬುದನ್ನು ಜ| ರಾವತ್‌ ಸಾವು ದೃಢೀಕರಿಸಿದೆ. ರಾವತ್‌ರ ಸಾವಿನಿಂದಾಗಿ ಭಾರತದ ಸೇನಾ ಆಧುನೀಕರಣ ಯೋಜನೆಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಲೇವಡಿ ಮಾಡಿದೆ.

ಇನ್ನು, ಚೀನದ ಸೇನಾ ತಜ್ಞ ವೇಯ್‌ ಡಾಂಕ್ಸು “ಭಾರತೀಯ ಮಾಧ್ಯಮಗಳು, ಪ್ರತಿಕೂಲ ಹವಾಮಾನ, ಹೆಲಿಕಾಪ್ಟರನ್ನು ನಿಗದಿತ ಎತ್ತರಕ್ಕಿಂತ ಹೆಚ್ಚು ಎತ್ತರದಲ್ಲಿ ಹಾರಿಸಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದಿವೆ. ಇದು ನಿಜವೇ ಆಗಿದ್ದರೆ ನಿಯಮ ಮೀರುವುದು ಸರಿಯಲ್ಲ’ ಎಂದಿದ್ದಾರೆ. ಇದನ್ನೇ ತನ್ನ ವರದಿಯಲ್ಲಿ ಉಲ್ಲೇಖೀಸಿ ಸಂಪಾದಕೀಯ ಬರೆದಿರುವ ಪತ್ರಿಕೆ, ಸೇನಾ ಯಂತ್ರೋಪಕರಣಗಳನ್ನು ಬಳಸುವಲ್ಲಿ ಭಾರತೀಯರು ಅಸಮರ್ಥರು’ ಎಂದಿದೆ.

ರಾವತ್‌ ನಿಧನದಿಂದ ಭಾರತೀಯ ಸೇನಾ ಪಡೆಗಳ ಆಧುನೀಕರಣ ಪ್ರಕ್ರಿಯೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳುವ ಮೂಲಕ, ಈ ಪತ್ರಿಕೆ, ಭಾರತವು ತನ್ನ ಸೇನೆಯನ್ನು ಆಧುನೀಕರಣಗೊಳಿಸುತ್ತಿರುವುದರ ಬಗ್ಗೆ ಆತಂಕಗೊಂಡಿತ್ತು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ.

ಪಾಕ್‌ಗಾದರೂ ಇದೆ ಕೊಂಚ ಮಾನವೀಯತೆ.. ಆದರೆ… ಸಾಂಪ್ರದಾಯಿಕ ಶತ್ರುವೆಂದೇ ಬಿಂಬಿಸಲ್ಪಟ್ಟಿರುವ ಪಾಕಿಸ್ಥಾನದ ಸೇನೆಯ ಮುಖ್ಯಸ್ಥ ನದೀಮ್‌ ರಾಜಾ ಹಾಗೂ ಜಂಟಿ ಮುಖ್ಯಸ್ಥರಾದ ಜ| ಖುಮರ್‌ ಜಾವೇಜ್‌ ಬಾಜ್ವಾ ಜ| ರಾವತ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆದರೆ ಚೀನ ಮಾತ್ರ ಕನಿಷ್ಠ ಮಾನವೀಯತೆಯನ್ನೂ ತೋರದೆ ಭಾರತದ ಕಡೆ ಬೆರಳು ಮಾಡಿ ಅವಹೇಳನ ಮಾಡುತ್ತಿದೆ.

ಕೃಪೆ: ಉದಯವಾಣಿ

Edited By : Vijay Kumar
PublicNext

PublicNext

10/12/2021 12:44 pm

Cinque Terre

20.39 K

Cinque Terre

3

ಸಂಬಂಧಿತ ಸುದ್ದಿ