ಗದಗ: ದಂಡ ವಸೂಲಿ ವಿಚಾರವಾಗಿ ಗದಗ ನಗರದನಲ್ಲಿ ಟ್ರಾಫಿಕ್ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ.
ದಂಡ ವಸೂಲಿಗೆ ಬೇಸತ್ತು ಪೊಲೀಸರ ಜೊತೆ ವಾಹನ ಸವಾರರು ವಾಗ್ವಾದ ನಡೆಸಿದ್ದಾರೆ. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಈ ಘಟನೆ ನಡೆದಿದೆ. ವಾಹನ ಹಿಡಿದು ವಿನಾಕಾರಣ ದಂಡ ವಸೂಲಿ ಮಾಡ್ತಾರೆ. ವಾಹನದ ಡಾಕ್ಯುಮೆಂಟ ಸರಿ ಇದ್ರೂ ನೂರು, ಇನ್ನೂರು ಹಣ ವಸೂಲಿ ಮಾಡ್ತಿದ್ದಾರೆ ಅಂತ ಜನ ಆರೋಪಿಸಿದ್ದಾರೆ.
ವಾಗ್ವಾದ ಕಂಡು ಸ್ಥಳದಲ್ಲಿ ಕೂಡಿದ ಸಾರ್ವಜನಿಕರು ದಂಡ ವಸೂಲಿಗೆ ನಿಂತ ಪೊಲೀಸರ ಚಳಿ ಬಿಡಿಸಿದ್ದಾರೆ. ನಿಮ್ಮ ಪೊಲೀಸ್ ಕ್ಯಾಪ್ ಎಲ್ಲಿದೆ? ನೇಮ್ ಪ್ಲೇಟ್ ಎಲ್ಲಿದೆ? ಅಂತ ಟ್ರಾಫಿಕ್ ಪೊಲೀಸರಿಗೆ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೂ ಎ.ಎಸ್.ಐ ನೇಮ್ ಪ್ಲೇಟ್ ಹಾಕಿಕೊಳ್ಳುವ ವರೆಗೂ ನೆರೆದಿದ್ದ ಜನ ಬಿಡಲೇ ಇಲ್ಲ. ರಾಮಣ್ಣ ನಿರಲಗಿ, ಎ.ಎಸ್.ಐ, ಗಂಗಾಧರ್ ಪೂಜಾರ್ ಹೆಡ್ ಕಾನಸ್ಟೆಬಲ್ ವಿರುದ್ಧ ಆಕ್ರೋಶ ಹೊರಹಾಕಿದರು. ದಂಡ ವಸೂಲಿಗೆ ಮುಂದಾದ ಪೊಲೀಸರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ರು.
PublicNext
28/11/2021 09:12 pm