ನವದೆಹಲಿ: ವೃದ್ದಾಪ್ಯದಲ್ಲಿ ಪೋಷಕರಿಗೆ ಮಕ್ಕಳ ನೆರವು ಬೇಕೇ ಬೇಕಾಗುತ್ತದೆ. ಆದರೆ ಮಕ್ಕಳು ಅವರಿಂದ ದೂರವ ಇರುತ್ತಾರೆ. ಅವರಿಗೆ ಬೇಕಾದನ್ನ ಕೊಡದೇ ಸತಾಯಿಸುತ್ತಾರೆ. ಅಂತಹದ್ದೇ ಒಂದು ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗ ಒಂದು ತೀರ್ಪು ಕೊಟ್ಟಿದೆ.ಏನ್ ಅದು ಬನ್ನಿ ಹೇಳ್ತೀವಿ..
ಪೂರ್ವ ದೆಹಲಿಯ ಮಸ್ತ್ರಿ ಅನ್ನೋರಿಗೆ ಬರೋಬ್ಬರಿ-72 ವರ್ಷ.ಇವರಿಗೆ 6 ಜನ ಹೆಣ್ಣುಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಮಕ್ಕಳಿಗೆ ಏನ್ ಕೊಡಬೇಕೋ ಅದನ್ನ ಕೊಟ್ಟಿದ್ದಾರೆ.ಹೆಣ್ಣುಮಕ್ಕಳು ಅಪ್ಪನಿಗೆ ಸಪೋರ್ಟ್ ಮಾಡಿದ್ದಾರೆ.
ಆದರೆ ಸಮಸ್ಯೆ ಆಗಿರೋದೇ ಗುತ್ತಿಗೇದಾರ ಪುತ್ರನಿಂದಲೇ,ಅಪ್ಪನ ಆಸ್ತಿಯನ್ನ ಪಡೆದಿರೋ ಮಗ,ಏನೂ ಕೊಡದೇ ಇದ್ದಾಗ, ಅಪ್ಪ 2015 ರಲ್ಲಿ ಕೋರ್ಟ್ ಮೆಟ್ಟಿಲೇರಿ ಜೀವನಾಂಶವನ್ನ ಕೊಡಬೇಕು ಅಂತ ಕೇಳಿದ್ದರು.
ಅದು ಈಗ ಈ ನ್ಯಾಯಾಲಯದಿಂದ ಆ ನ್ಯಾಯಲಕ್ಕೆ ಹೋಗಿ ಕೊನೆ ಸುಪ್ರಿಂ ಕೋರ್ಟ್ ಗೆ ಬಂದು ತಲುಪಿದೆ. ಸಿಜೆಐ ಪೀಠ ಈ ಕೇಸ್ ನ ವಿಚಾರಣೆ ನಡೆಸಿದೆ. ಪುತ್ರನನ್ನ ತರಾಟೆಗೆ ತೆಗೆದುಕೊಂಡ ಪೀಠ,ಕೇವಲ 10 ಸಾವಿರ ಜೀವನಾಂಶಕ್ಕಾಗಿಯೇ ವಯಸ್ಸಾದ ತಂದೆಯನ್ನ ಕೋರ್ಟ್ ಅಲೆಯುವಂತೆ ಮಾಡೋದು ಎಷ್ಟು ಸರಿ.ಪೋಷಕರನ್ನ ನೋಡಿಕೊಳ್ಳುವುದು ಮಕ್ಕಳ ಆದ್ಯ ನೈತಿಕ ಕರ್ತವ್ಯ ಅಂತಲೂ ಹೇಳಿ ಕಳಿಸಿದೆ. ಕೋರ್ಟ್ ನ ಈ ತೀರ್ಪೆ ಈಗ ಅತಿ ಹೆಚ್ಚು ಚರ್ಚೆ ಆಗುತ್ತಿದೆ.
PublicNext
25/11/2021 11:45 am