ನವದೆಹಲಿ: 59 ಮಂದಿ ಸಾವಿಗೆ ಕಾರಣವಾಗಿದ್ದ 1997ರ ದೆಹಲಿಯ ಉಪಹಾರ್ ಚಿತ್ರಮಂದಿರದ ಅಗ್ನಿ ಅವಘಡ ಪ್ರಕರಣದಲ್ಲಿ ಸಾಕ್ಷಿಗಳನ್ನು ತಿರುಚಿದ ಆರೋಪದಡಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬೃಹತ್ ಆಸ್ತಿ ವ್ಯವಹಾರ ಹೊಂದಿರುವ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ತಲಾ 2.25 ಕೋಟಿ ರೂ. ದಂಡ ವಿಧಿಸಿದೆ. ಒಂದು ತಿಂಗಳ ಹಿಂದೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದಲ್ಲಿ ಇಬ್ಬರಿಗೂ ಶಿಕ್ಷೆಯಾಗಿತ್ತು. ಇಂದು (ಸೋಮವಾರ) ಶಿಕ್ಷೆಯ ತೀರ್ಪು ಹೊರಬಿದ್ದಿದೆ.
ಬಾಲಿವುಡ್ ಸಿನಿಮಾ ‘ಬಾರ್ಡರ್’ ಪ್ರದರ್ಶನದ ವೇಳೆ ಉಪಹಾರ್ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಥಿಯೇಟರ್‌ನಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ 59 ಜನರು ಉಸಿರುಗಟ್ಟಿ ಸಾವನ್ನಪ್ಪಿದರು, 100 ಕ್ಕೂ ಹೆಚ್ಚು ಜನರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು. ಈ ದುರಂತದ ಇತರ ಇಬ್ಬರು ಆರೋಪಿಗಳಾದ ಹರ್ ಸ್ವರೂಪ್ ಪನ್ವಾರ್ ಮತ್ತು ಧರ್ಮವೀರ್ ಮಲ್ಹೋತ್ರಾ ಅವರು ವಿಚಾರಣೆಯ ವೇಳೆ ಸಾವಿಗೀಡಾಗಿದ್ದರು.
PublicNext
08/11/2021 06:35 pm