ಬೆಂಗಳೂರು : ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 11 ಪೊಲೀಸರಿಗೆ 'ಸ್ಪೆಷಲ್ ಆಪರೇಷನ್ ಅವಾರ್ಡ್'ಗೆ ಭಾಜನರಾಗಿದ್ದಾರೆ. ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ನೀಡುವ ಪ್ರಶಸ್ತಿ ಇದಾಗಿದೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರ ಬಂಧನ ನಡೆಸಿರುವ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸಿದ ತನಿಖಾಧಿಕಾರಿ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಿರುವ ವಿಶೇಷ ಪದಕ ಇದಾಗಿದೆ.
ರಾಷ್ಟ್ರೀಯ ತನಿಖಾ ದಳದ (ಎನ್ ಐಎ) ಕರ್ನಾಟಕ ಕೇಡರ್ ಡಿಐಜಿ ಸೋನಿಯಾ ನಾರಂಗ್, ಸಂಜಯನಗರ ಇನ್ ಸ್ಪೆಕ್ಟರ್ ಜಿ.ಬಾಲರಾಜು ಮತ್ತು ಐಎಸ್ ಡಿ ಸಹಾಯಕ ಸಬ್ ಇನ್ ಸ್ಪೆಕ್ಟರ್ ಎಂ.ಸೌಕತ್ ಅಲಿ, ಮುಖ್ಯಪೇದೆ ಪಿ.ಸೋಮಶೇಖರ್ಗೆ ಪ್ರಶಸ್ತಿ ಲಭಿಸಿದೆ.ಡಿಸಿಪಿ ಕೆ.ಸಂತೋಷ್ ಬಾಬು ಮತ್ತು ಹೆಡ್ ಕಾನ್ಸಟೆಬಲ್ ಸೋಮಶೇಖರ್, ಗುಪ್ತದಳ ವಿಭಾಗದ ಡಿಸಿಪಿ ಕೆ.ಸಂತೋಷ್ ಬಾಬು ಮತ್ತು ಮುಖ್ಯಪೇದೆ ಕ್ರುದ್ದೀನ್ ಕುಂದಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಇದೇ ರೀತಿ ಇನ್ ಸ್ಪೆಕ್ಟರ್ಗಳಾದ ಪಿ.ಶಿವಕುಮಾರ್, ಎಚ್.ವಿ.ಸುದರ್ಶನ್, ಮಹೇಶ್ ಪ್ರಸಾದ್, ಎಸ್.ಆರ್.ಶ್ರೀಧರ್, ಕಾನ್ ಸ್ಟೇಬಲ್ ಅಕ್ಬರ್ ಯಡ್ರಾಮಿ ಮತ್ತು ಮುಖ್ಯಪೇದೆ ಶ್ರೀಕೃಷ್ಣ ದೇವಿಗೌಡ ಅವರಿಗೆ 'ಸ್ಪೇಷಲ್ ಆಪರೇಷನ್ ಅವಾರ್ಡ್' ಲಭಿಸಿದೆ.
PublicNext
01/11/2021 01:10 pm