ಧಾರವಾಡ: ರಾಜ್ಯದ ಪ್ರತಿಷ್ಟಿತ ಗುತ್ತಿಗೆದಾರರಾದ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ಆಪ್ತರಾದ ಯು.ಬಿ.ಶೆಟ್ಟಿ ಅವರ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಇದೀಗ ಯು.ಬಿ.ಶೆಟ್ಟಿ ಅವರ ಸಹೋದರ ಸೀತಾರಾಮ್ ಶೆಟ್ಟಿ ಅವರ ಮನೆ ಮೇಲೂ ಐಟಿ ಅಧಿಕಾರಿಗಳು ದೊಡ್ಡಮಟ್ಟದಲ್ಲಿ ದಾಳಿ ನಡೆಸಿದ್ದಾರೆ.
ದಾಸನಕೊಪ್ಪ ಸರ್ಕಲ್ ಬಳಿ ಇರುವ ಯು.ಬಿ.ಶೆಟ್ಟಿ ಹಾಗೂ ವಿನಾಯಕ ನಗರದಲ್ಲಿರುವ ಸೀತಾರಾಮ್ ಶೆಟ್ಟಿ ಅವರ ಮನೆಗೆ ಇಂದು ಏಕಕಾಲಕ್ಕೆ ಐಟಿ ದಾಳಿ ನಡೆದಿದೆ.
ಸೀತಾರಾಮ್ ಶೆಟ್ಟಿ ಕೂಡ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ. ಇವರು ಹೆಚ್ಚಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಗುತ್ತಿಗೆ ಪಡೆದ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟು 9 ಇನ್ನೋವಾ ಕಾರಿನಲ್ಲಿ ಬಂದ 20 ಜನ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದಲೇ ಸೀತಾರಾಮ್ ಶೆಟ್ಟಿ ಅವರ ಮನೆಯೊಳಗೆ ಹೋಗಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
PublicNext
28/10/2021 03:11 pm