ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃಕ್ಷರಕ್ಷಕರ ಮೇಲೆ ಆಡುಗೋಡಿ ಇನ್ಸ್ಪೆಕ್ಟರ್ ಪ್ರಶಾಂತ್ ದಬ್ಬಾಳಿಕೆ ?

ಬೆಂಗಳೂರು:ಇಲ್ಲಿಯ ಆಡುಗೋಡಿಯ ಪೊಲೀಸ್ ಠಾಣೆಯಲ್ಲಿರೋ ಇನ್ಸ್ಪೆಕ್ಟರ್ ಪ್ರಶಾಂತ್,ವೃಕ್ಷ ರಕ್ಷಕರ ಮೇಲೆ ದಬ್ಬಾಳಿ ಮಾಡಿದ್ದಾರೆ. ಅವರಿಗೆ ಅವಾಚ್ಯ ಶಬ್ದಗಳಿಂದಲೇ ಬೈದು ಹಾಕಿದ್ದಾರೆ. ಹಾಗಂತ ನಾವು ಹೇಳುತ್ತಿಲ್ಲ. ಈಗ ಹರಿದಾಡುತ್ತಿರೋ ವೀಡಿಯೋ ಆ ಸತ್ಯವನ್ನ ಸಾರಿ,ಸಾರಿ ಹೇಳುತ್ತಿದೆ.

ವೃಕ್ಷರಕ್ಷಕ ಯುವಕರು ಇತ್ತೀಚಿಗೆ ಆಡುಗೋಡಿಯ ಪೊಲೀಸ್ ಠಾಣೆಗೆ ಹೋಗಿದ್ದರು. ಕಾರಣ ಏನೂ ಅಂತ ತಿಳಿದು ಬಂದಿಲ್ಲ.ಆದರೆ ಸ್ಟೇಷನ್ ನಲ್ಲಿ ಇವರಿಗೆ ಸರಿಯಾದ ಸ್ವಾಗತವೇ ಸಿಕ್ಕಿದೆ. ಪೊಲೀಸರಿಂದ ಆರಂಭದಲ್ಲಿಯೇ ಅಡೆ-ತಡೆನೂ ಆಗಿದೆ. ಹಂಗು-ಹಿಂಗು ಮಾಡಿಯೇ ಇನ್ಸ್ಪೆಕ್ಟರ್ ಪ್ರಶಾಂತ್ ಬಳಿ ಹೋದ್ರೆ, ಅಲ್ಲಿ ಈ ವೃಕ್ಷರಕ್ಷಕ ಯುವಕರಿಗೆ ಸಿಕ್ಕಿದು ರೌಡಿಶೀಟರ್ ಲಿಸ್ಟ್ ಗೆ ಸೇರಿಸುತ್ತೇನೆ ಎಂಬ ಪ್ರಶಾಂತ್ ಅವರ ಖಡಕ್ ಅವಾಜ್.

ಇದರ ಜೊತೆಗೆ ಕಾಂಪ್ಲಿಮೆಂಟ್ರಿ ಅನ್ನೋ ಥರವೇ ಲೋಫರ್ಸ್ ನಿಮನ್ನ ಒದ್ದು ಒಳಗೆ ಹಾಕ್ತೀನಿ ಅಂದಿರೋ ಪರಮಪಾವನ ಪದಗಳ ಸರಮಾಲೆ. ಇನ್ನೇನು ಬೇಕು, ತಮಗೆ ಆದ ಈ ಅನುಭವದ ವೀಡಿಯೋ ಬುತ್ತಿಯನ್ನ ವೃಕ್ಷರಕ್ಷಕರು ಈಗ ಎಲ್ಲೆಡೆ ಹರಿಬಿಟ್ಟಿದ್ದಾರೆ. ಇದರ ಫಲ ಇನ್ಸ್ಪೆಕ್ಟರ್ ಪ್ರಶಾಂತ್ ಅವರ ಬಗ್ಗೆ ಲೆಫ್ಟು ರೈಟು ಕಾಮೆಂಟ್ ಗಳೇ ಬರುತ್ತಿವೆ. ಆದರೆ ಇನ್ಸೆಪಕ್ಟರ್ ಪ್ರಶಾಂತ್ ಯಾಕ್ ಇಷ್ಟೊಂದು ಸಿಟ್ಟು ಮಾಡಿಕೊಂಡ್ರು ಅನ್ನೋದೇ ಈಗ ಕೊನೆಗೆ ಉಳಿದ ಪ್ರಶ್ನೆ.

Edited By :
PublicNext

PublicNext

25/10/2021 04:28 pm

Cinque Terre

29.24 K

Cinque Terre

2