ಶ್ರೀನಗರ: ಪಾಕಿಸ್ತಾನದ ಬೆಂಬಲಿತ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೈಬಾದ ಆರು ಸಶಸ್ತ್ರ ಸರ್ಜಿತ ಉಗ್ರರನ್ನು ಭಾರತೀಯ ಯೋಧರು ರಾಜೌರಿ ಅರಣ್ಯದಲ್ಲಿ ಹೊಡೆದುರುಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯಲು ಉಗ್ರರು ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ. ರಾಜೌರಿ ಸೆಕ್ಟರ್‌ನ ದಟ್ಟಾರಣ್ಯದಲ್ಲಿ 16 ಕಾರ್ಪ್ಸ್ ಕಮಾಂಡರ್ ಯೋಧರ ಮತ್ತು ಉಗ್ರರ ನಡುವಿನ ಗುಂಡಿನ ಚಕಮಿಕಿ ನಡೆದಿದ್ದು, ಕೊನೆಗೆ ಆರು ಉಗ್ರರು ಭಾರತೀಯ ಯೋಧರ ಗುಂಡೇಟಿಗೆ ಬಲಿಯಾಗಿದ್ದಾರೆ.
ರಾಜೌರಿ ಅರಣ್ಯದಲ್ಲಿ 9 ಭಾರತೀಯ ಯೋಧರನ್ನು ಕಳೆದುಕೊಂಡ ನಂತರ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅಕ್ಟೋಬರ್ 17ರಂದು ಆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಉಗ್ರ-ವಿರೋಧಿ ಕಾರ್ಯಾಚರಣೆಗಳು ಮತ್ತು ಶೋಧಗಳು ತೀವ್ರಗೊಂಡಿದ್ದವು. ಪಾಕಿಸ್ತಾನದಿಂದ ಒಂಬತ್ತರಿಂದ 10 ಲಷ್ಕರ್ ಉಗ್ರರು ಕಳೆದ ಎರಡು ಮೂರು ತಿಂಗಳಲ್ಲಿ ರಾಜೌರಿ-ಪುಂಚ್ ಜಿಲ್ಲೆಯ ಗಡಿಯಲ್ಲಿ ಕಾಡಿನೊಳಗೆ ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚಿನ ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.
PublicNext
19/10/2021 03:51 pm