ನವದೆಹಲಿ: ಸಂಗಾತಿಯ ವಿರುದ್ಧ ನಿರಂತರವಾಗಿ ದೂರು ನೀಡುವುದು ಮತ್ತು ದಾವೆ ಹೂಡುವುದು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 (1) (i-a) ಅಡಿ ಕ್ರೌರ್ಯವಾಗಿದ್ದು ವಿಚ್ಛೇದನಕ್ಕೆ ನೆಲೆ ಕಲ್ಪಿಸುತ್ತದೆ ಎಂದು ಸುಪ್ರೀಂಕೋರ್ಟ್ ಸೋಮವಾರ ತೀರ್ಪು ನೀಡಿದೆ. (ಸಿವಸಂಕರನ್ ಮತ್ತು ಸಾಂತಿಮೀನಲ್ ನಡುವಣ ಪ್ರಕರಣ).
ಅಲ್ಲದೆ ತನ್ನ ಸಂಗಾತಿಯನ್ನು ಉದ್ಯೋಗದಿಂದ ತೆಗೆದುಹಾಕುವಂತೆ ದೂರುಗಳನ್ನು ಸಲ್ಲಿಸುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಪತಿಯ ವಿಚ್ಛೇದನ ಕೋರಿಕೆಯನ್ನು ಮನ್ನಿಸಿತು.
ಸಮ್ಮತಿ ನೀಡುವ ಪಕ್ಷಗಳ ನಡುವಿನ ಮದುವೆಯನ್ನು ರದ್ದುಪಡಿಸಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸುವ ಕುರಿತಂತೆ ಇರುವ ವಿಸ್ತೃತ ಸಂಗತಿಯನ್ನು ಸಾಂವಿಧಾನಿಕ ಪೀಠ ಪರಿಶೀಲಿಸುತ್ತಿದೆ ಎಂದು ನ್ಯಾಯಾಲಯ ಇದೇ ವೇಳೆ ಒಪ್ಪಿತು. ಆದರೂ, ವಿವಿಧ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ವಿಚ್ಛೇದನ ನೀಡಲು ಈ ಅಧಿಕಾರವನ್ನು ಚಲಾಯಿಸಿದೆ ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ.
PublicNext
14/09/2021 03:20 pm