ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನೋ ಪಾರ್ಕಿಂಗ್ ಟೋಯಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಇತ್ತು. ಇದರಿಂದ ಜನ ರೋಸಿ ಹೋಗಿದ್ದರು. ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಸಂಗವೂ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಕಾನೂನು ಬದ್ಧವಾಆಗಿ ಟೋಯಿಂಗ್ ಮಾಡಿ ಎಂದು ಖಡಕ್ ಆಗಿ ಹೇಳಿದ್ದರು. ಇದರ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಕಾರ್ಯಾಚರಣೆ ಸ್ಥಗಿತವಾಗಿದೆ.
ಟೋಯಿಂಗ್ ವಾಹನ ಎತ್ತಲ್ಲ ಎಂದ ಮಾಲೀಕರು: ರಾಜಧಾನಿ ಬೆಂಗಳೂರಿನಲ್ಲಿ 40 ಸಂಚಾರ ಪೊಲೀಸ್ ಠಾಣೆಗಳಿವೆ. ಸುಗಮ ಸಂಚಾರಕ್ಕೆ ಅವಕಾಶ ಕೊಡುವುದು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸಂಚಾರ ಪೊಲೀಸರ ಕರ್ತವ್ಯ. ಬೆಂಗಳೂರಿನಲ್ಲಿ ನೋ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಕ್ಕೆ ಒಂದು ಸಾವಿರ ದಂಡ, ಟೋಯಿಂಗ್ ಶುಲ್ಕ 325 ರೂ. ಸರ್ಕಾರದ ಶುಲ್ಕ 325 ರೂ. ಸೇರಿ ಒಟ್ಟು 1650 ರೂ. ದಂಡ ಪಾವತಿಸಬೇಕು. ಸರ್ಕಾರದ ನಿಯಮದ ಪ್ರಕಾರ ಒಂದು ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರೆ, ವಾಹನ ಮಾಲೀಕರಿಗೆ 325 ರೂ. ನೀಡಬೇಕು.
ಆದರೆ ಟೋಯಿಂಗ್ ವಾಹನ ಮಾಲೀಕರ ಒಕ್ಕೂಟ ಮಾಡುವುದೇ ಬೇರೆ. ಟೋಯಿಂಗ್ ವಾಹನ ಸಂಚಾರಕ್ಕೆ ದಿನಕ್ಕೆ ತಗಲುವ ಇಂಧನ ವೆಚ್ಚ, 3 ಸಾವಿರ, ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನ ತಲಾ 700 ರೂ. ಮತ್ತು ಊಟದ ವ್ಯವಸ್ಥೆ ಯನ್ನು ಟೋಯಿಂಗ್ ಮಾಡುವ ವಾಹನಗಳಿಂದ ಅಕ್ರಮವಾಗಿ ಟೋಯಿಂಗ್ ಚಾರ್ಜ್ ಹೆಸರಿನಲ್ಲಿ ಪಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಸದ್ಯ ನಿರ್ವಹಣೆ ವೆಚ್ಚ ನಿಭಾಯಿಸಲಾಗದೇ ಟೋಯಿಂಗ್ ಕಾರ್ಯಾಚರಣೆ ನಿಂತಿದೆ.
PublicNext
08/09/2021 04:54 pm