ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯೂ, ಅತ್ಯಾಚಾರ: ಹೈಕೋರ್ಟ್

ಕೊಚ್ಚಿ: ‘ವಿವಾಹದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸಮಾನರು ಎಂದು ಪರಿಗಣಿಸಲಾಗುತ್ತದೆ. ಪತ್ನಿಗಿಂತ ತಾನು ಹೆಚ್ಚು ಶ್ರೇಷ್ಠ ಎಂದು ಪತಿ ಭಾವಿಸಿಕೊಳ್ಳಬಾರದು. ಇದು ಆಕೆಯ ದೇಹವಾಗಿರಬಹುದು ಅಥವಾ ವೈಯಕ್ತಿಕ ಸ್ಥಾನಮಾನಕ್ಕೆ ಸಂಬಂಧಪಟ್ಟದ್ದಾಗಿರಬಹುದು’ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಮಹಿಳೆಯ ಜೊತೆ ಅಸಹಜ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರಕ್ಕೆ ಸಮ . ಪಕ್ಕದ ಮನೆಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದೆದೆ.

ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣಾ ಕೋರ್ಟ್ನಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಅವರಿದ್ದ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಸಹಜ ಲೈಂಗಿಕ ಕ್ರಿಯೆ ಸೆಕ್ಷನ್ 375 ರ ಅಡಿ ಖಂಡಿತವಾಗಿಯೂ ಅತ್ಯಾಚಾರ ಆಗುತ್ತದೆ ಎಂದು ಪೀಠವು ತೀರ್ಪು ನೀಡಿದೆ.

Edited By : Nirmala Aralikatti
PublicNext

PublicNext

07/08/2021 07:40 am

Cinque Terre

33.99 K

Cinque Terre

1

ಸಂಬಂಧಿತ ಸುದ್ದಿ