ಬೆಂಗಳೂರು: ರಾಜ್ಯ ರಾಜಕಾರಣದಲ್ಲಿಯ ಬದಲಾವಣೆಗಳು ಒಂದುಕಡೆಯಾದ್ರೆ ಮತ್ತೊಂದೆಡೆ ಪೊಲೀಸ್ ಇಲಾಖೆಯಲ್ಲಿಯೂ ಮೇಜರ್ ಸರ್ಜರಿಯಾಗಿದೆ. ಹೌದು ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ನಗರ ಪೊಲೀಸ್ ಆಯುಕ್ತ ಸ್ಥಾನಕ್ಕೇರಲು ನಾಲ್ವರು ಅಧಿಕಾರಿಗಳು ಪೈಪೋಟಿ ನಡೆಸಿದ್ದಾರೆ.
ಆಗಸ್ಟ್ ಗೆ ಪೊಲೀಸ್ ಆಯುಕ್ತರ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಗುಪ್ತಚರ ವಿಭಾಗದ ಬಿ. ದಯಾನಂದ್, ಪೊಲೀಸ್ ತರಬೇತಿ ವಿಭಾಗದ ಅಮೃತ್ ಪೌಲ್, ರಾಜ್ಯ ಆಡಳಿತ ವಿಭಾಗದ ಎಡಿಜಿಪಿ ಎಂಎ ಸಲೀಂ ನಡುವೆ ಪೈಪೋಟಿ ಏರ್ಪಟಿದೆ.
ಈ ಪೈಕಿ ಕನ್ನಡಿಗರಾದ ಸಲೀಂ ಮತ್ತು ದಯಾನಂದ್ ನಡುವೆ ತೀವ್ರ ಪೈಪೋಟಿ ಇದ್ದು, ಬಿ.ದಯಾನಂದ್ ಕಮಿಷನರ್ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇನ್ನು ಸಿಟಿ ಡಿಸಿಪಿಗಳಲ್ಲೂ ಬದಲಾವಣೆ ಆಗುವ ಸಾಧ್ಯತೆ ಕಾಣುತ್ತಿದೆ. ಆರು ಡಿವಿಷನ್ ಬದಲಾವಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. 6ರಲ್ಲಿ ಕೆಲವರು ಅಲ್ಲೇ ಉಳಿಯಲು ಕಸರತ್ತು ನಡೆಸಿದ್ದಾರೆ.
ಒಟ್ಟಿನಲ್ಲಿ ಸಿಎಂ ಬದಲಾವಣೆ ಬೆನ್ನಲ್ಲೇ ನಗರ ಪೊಲೀಸ್ ಇಲಾಖೆಯಲ್ಲಿಯೂ ಸಂಚಲನ ಶುರುವಾಗಿದೆ.
PublicNext
31/07/2021 03:06 pm