ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗ್ರರ ಇಬ್ಬರು ಸಹಚರರು ಅರೆಸ್ಟ್

ಶ್ರೀನಗರ: ಲಷ್ಕರ್ ಎ ತಯಬಾ ಸಂಘಟನೆಗೆ ಸೇರಿದ ಉಗ್ರರ ಇಬ್ಬರು ಸಹಚರರನ್ನು ಜಮ್ಮು ಮತ್ತು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬಂಧಿಸಿವೆ.

ಬಂಡಿಪೊರದ ನಿವಾಸಿ ಅಬಿದ್ ವಾಝಾ ಮತ್ತು ಬಶೀರ್ ಅಹಮದ್ ಗೊಜೆರ್ ಬಂಧಿತರು. ಆರೋಪಿಗಳಿಂದ ಅಪರಾಧ ಕೃತ್ಯಕ್ಕೆ ಬಳಸುವ ಕೆಲವೊಂದು ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

''ಉಗ್ರರ ಇರುವಿಕೆಯನ್ನು ಅರಿತ ಭದ್ರತಾ ಪಡೆ ಪಾಪಚನ್-ಬಂಡಿಪೊರ ಸೇತುವೆಯ ಬಳಿ ಶುಕ್ರವಾರ ಚೆಕ್‌ಪಾಯಿಂಟ್‌ ಅನ್ನು ಸ್ಥಾಪಿಸಿದ್ದರು. ಈ ವೇಳೆ ಉಗ್ರರಿಗೆ ಆಶ್ರಯ ಮತ್ತು ಅವರ ಕಾರ್ಯಾಚರಣೆಗಳಿಗೆ ಬೇಕಾಗಿರುವ ವಸ್ತುಗಳನ್ನು ಪೂರೈಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

20/02/2021 02:04 pm

Cinque Terre

34.26 K

Cinque Terre

0

ಸಂಬಂಧಿತ ಸುದ್ದಿ