ನವದೆಹಲಿ: ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಕಾನೂನು ಬದ್ಧವಾಗಿಯೇ ಆಗಿದೆ. 22 ವರ್ಷದವರಿಗೆ ಒಂದು ಕಾನೂನು, 50 ವರ್ಷದವರಿಗೆ ಮತ್ತೊಂದು ಕಾನೂನು ಎಂಬುದಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 22 ವರ್ಷದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಬಂಧನ ವೇಳೆ ಕಾನೂನು ಲೋಪವಾಗಿದೆ, ನಿಯಮ ಪ್ರಕಾರ ಬಂಧಿಸಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು. ದಿಶಾ ರವಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ. ಮತ್ತು ತನಿಖೆ ಮುಂದುವರಿದಿದೆ ಎಂದರು.
PublicNext
16/02/2021 07:15 pm