ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಕೃತ್ಯ ಹೆಚ್ಚಾಗುತ್ತಲೇ ಇದೆ. ಪುಲ್ವಾಮಾದಲ್ಲಿ ಫೆಬ್ರವರಿ ೧೪ರಂದು ಜಮ್ಮು-ಕಾಶ್ಮೀರದ ಬಸ್ ನಿಲ್ದಾಣದ ಬಳಿ 6 ಕೆಜಿ ಸುಧಾರಿತ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬೆನ್ನಲ್ಲೇ ಸಿಆರ್‌ಪಿಎಫ್ ವಾಹನ ಗುರಿಯಾಗಿಸಿಕೊಂಡು ಉಗ್ರರು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಸಿಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಜಲ್ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಉಗ್ರರು ಐಇಡಿ ಸಿಡಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಸ್ಫೋಟದಲ್ಲಿ ನಾಗರಿಕರ ವಾಹನಗಳಿಗೂ ಹಾನಿಯಾಗಿವೆ. ತಕ್ಷಣವೇ ಭದ್ರತಾ ಪಡೆಯು ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದೆ. ಸದ್ಯ ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
PublicNext
16/02/2021 03:43 pm