ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ ಕುರಿತ 'ಟೂಲ್​ಕಿಟ್' ಕೇಸ್​​: ದಿಶಾ ರವಿ 5 ದಿನ ಪೊಲೀಸ್​ ಕಸ್ಟಡಿಗೆ

ಬೆಂಗಳೂರು: ರೈತರ ಪ್ರತಿಭಟನೆ ಕುರಿತು ಟೂಲ್‌ಕಿಟ್‌ ಪ್ರಕರಣದ ಆರೋಪಿ, ಬೆಂಗಳೂರು ಮೂಲದ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಅವರನ್ನು 5 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಎಫ್​ಎಫ್​​ಎಫ್​​​​(fridays for future) ಸ್ಥಾಪಕರಲ್ಲಿ ದಿಶಾ ರವಿ ಕೂಡ ಒಬ್ಬರಾಗಿದ್ದಾರೆ. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿರೋ ಅವರು, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದರು. ನಂತರ ಅವರನ್ನು ನೇರವಾಗಿ ದೆಹಲಿಗೆ ಕೊಂಡೊಯ್ದು ಪಟಿಯಾಲ ಹೌಸ್​ ಕೋರ್ಟ್ ಎದುರು ಹಾಜರುಪಡಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ದಿಶಾ ಅವರನ್ನು ಐದು ದಿನ ಪೊಲೀಸ್​ ಕಸ್ಟಡಿಗೆ ನೀಡಿದೆ. ಟೂಲ್​​ಕಿಟ್​ ರಚಿಸಿದವರ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್​ಗಳ ಅಡಿಯಲ್ಲಿ ದೆಹಲಿ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Edited By : Vijay Kumar
PublicNext

PublicNext

14/02/2021 04:21 pm

Cinque Terre

56.36 K

Cinque Terre

3

ಸಂಬಂಧಿತ ಸುದ್ದಿ