ಮುಂಬೈ: ಸಂತ್ರಸ್ತೆಯ ಬಾಯಿಗೆ ಬಟ್ಟೆ ತುರುಕಿ, ಆಕೆಯ ಬಟ್ಟೆ ಬಿಚ್ಚಿ, ಕಿಂಚಿತ್ತೂ ಪ್ರತಿರೋಧವಿಲ್ಲದೇ ಅತ್ಯಾಚಾರ ಮಾಡಲು ಓರ್ವ ಪುರುಷನಿಂದ ಸಾಧ್ಯವಿಲ್ಲ. ಅಲ್ಲದೇ ಸಂತ್ರಸ್ತೆಯ ವಯಸ್ಸು 18 ಮೀರಿದೆ. ಹೀಗಾಗಿ ಇದು ಒಪ್ಪಿತ ಸಂಬಂಧ ಎಂದು ನಾಗ್ಪುರ ಹೈಕೋರ್ಟ್ ಪೀಠ ಹೇಳಿದೆ.
ಅತ್ಯಾಚಾರ ಪ್ರಕರಣವೊಂದರ ಕುರಿತಾಗಿ ಹೀಗೆ ತೀರ್ಪು ಬಂದಿದೆ. 2013ರಲ್ಲಿ ಸೂರಜ್ ಎಂಬಾತ ನೆರೆಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆಕೆಯ ತಾಯಿ ದೂರು ನೀಡಿದ್ದಳು. ಈ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ವೈದ್ಯಕೀಯ ಪರೀಕ್ಷೆ ವರದಿ ಪ್ರಕಾರ ಯುವತಿ ಪ್ರತಿರೋಧ ಒಡ್ಡಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಓರ್ವ ಪುರುಷನಿಗೆ ಒಂದೇ ಪ್ರಯತ್ನದಲ್ಲಿ ಬಟ್ಟೆ ತುರುಕಿ, ತನ್ನ ಬಟ್ಟೆ ಬಿಚ್ಚಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಸಾಧ್ಯವಿಲ್ಲ ಎಂದು ತೀರ್ಪು ಕೊಟ್ಟು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
PublicNext
29/01/2021 09:01 pm