ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸರ್ಕಾರಕ್ಕೆ ಪ್ರಧಾನಿ ಹೆಸರು ಬಳಕೆ ಬೇಡ : ಹೈಕೋರ್ಟ್ ಗೆ PIL ಸಲ್ಲಿಕೆ

ಬೆಂಗಳೂರು: ದೇಶದಲ್ಲಿ ಪ್ರಧಾನಿಗಳ ಫಾಲೋವರ್ಸ್ ಹೆಚ್ಚಿದ್ದಾರೆ. ಆದರೆ ಯಾರೇ ಪ್ರಧಾನಿ,ಸಿಎಂಗಳಿದ್ದರೂ ಜನ ಅವರ ಹೆಸರು ಬಳಕೆ ಮಾಡಿ ಸರ್ಕಾರವನ್ನು ಕರೆಯುವುದು ರೂಢಿ…

ಅದೇ ರೀತಿ ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಕೋರಿ ಹೈಕೋರ್ಟ್ ಗೆ PIL ಸಲ್ಲಿಕೆಯಾಗಿತ್ತು. ಮಲ್ಲಿಕಾರ್ಜುನ ಎಂಬುವವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಜೊತೆಗೆ, ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು BSYಸರ್ಕಾರ ಎಂಬ ಸಂಬೋಧನೆಗೂ ನಿರ್ಬಂಧ ಕೋರಲಾಗಿತ್ತು. ಆದರೆ, ಇದೀಗ, ಕೇಂದ್ರ ಸರ್ಕಾರವನ್ನು ಮೋದಿ ಸರ್ಕಾರ ಎಂದು ಸಂಬೋಧಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜೊತೆಗೆ, ಈ ಕುರಿತು PIBಗೆ ಮನವಿ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಈ ಮೂಲಕ, ಹೈಕೋರ್ಟ್ ಮಲ್ಲಿಕಾರ್ಜುನ ಎಂಬುವವರ PILನ ಇತ್ಯರ್ಥಗೊಳಿಸಿದೆ.

Edited By : Nirmala Aralikatti
PublicNext

PublicNext

25/01/2021 06:34 pm

Cinque Terre

35.71 K

Cinque Terre

1